ತೆರಿಗೆ ಪಾವತಿ ಬಾಕಿ ಮಾಲ್‌ಗೆ ಬೀಗ
ಬಳ್ಳಾರಿ : ಮಹಾನಗರ ಪಾಲಿಕೆಗೆ ನಾಲ್ಕು ವರ್ಷಗಳ ತೆರಿಗೆ ಬಾಕಿ ಪಾವತಿಸದ ಹಿನ್ನೆಲೆ ಎಸ್‌ಎಲ್‌ಎನ್ ಮಾಲ್‌ಗೆ ಅಧಿಕಾರಿಗಳು ಬಂದ್ ಮಾಡಿ ಬೀಗ ಹಾಕಿದ್ದಾರೆ.
ತೆರಿಗೆ, ಹಿಂದಿನ ಬಾಕಿ, ಬಡ್ಡಿ ಸೇರಿ ಒಟ್ಟು 2.45 ಕೋಟಿ ರೂ. ಹಣವನ್ನು ಎಸ್‌ಎನ್‌ಎಲ್ ಮಾಲ್ ಪಾವತಿಸಬೇಕಿದೆ. ತೆರಿಗೆ ಬಾಕಿ ಸಂಬಂಧ ಎಸ್‌ಎಲ್‌ಎನ್ ಮಾಲ್‌ಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ತಗಾದೆ ನೋಟಿಸ್‌ಗಳನ್ನೂ ನೀಡಲಾದರೂ ತೆರಿಗೆ ಪಾವತಿಸಿಲ್ಲ. ವರ್ಷದ ಹಿಂದೆಯೂ ಮಾಲ್‌ಗೆ ಬೀಗ ಹಾಕಲಾಗಿತ್ತು. ಆಗ 37 ಲಕ್ಷ ರೂ. ಪಾವತಿ ಮಾಡಲಾಗಿತ್ತು. ಉಳಿದ ಹಣ ಪಾವತಿಸುವ ಭರವಸೆ ನೀಡಿತ್ತು. ಆದರೆ, ಪ್ರಸ್ತಕ ಮಾರ್ಚ್ ತಿಂಗಳು ಕಳೆದರೂ ತೆರಿಗೆ ಪಾವತಿ ಮಾಡದ ಕಾರಣಕ್ಕೆ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.