ಹೂವಿನಹಡಗಲಿ ಶಾಖಾ ಗ್ರಂಥಾಲಯದ ಮೊದಲ ಮಹಡಿ ಕಟ್ಟಡವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಗ್ರಂಥಾಲಯ ಅಧಿಕಾರಿ ಬಿ.ನಾರಾಯಣ್ ದಾಸ್, ಹರಪನಹಳ್ಳಿ ಗ್ರಂಥಾಲಯ ಅಧಿಕಾರಿ ಮಂಜುನಾಥ ಭೋವಿ, ಕೆಆರ್‌ಐಡಿಎಲ್ ಎಇಇ ಜಯನಾಯ್ಕ ಇತರರಿದ್ದರು. 
ಬಳ್ಳಾರಿ

ಗ್ರಂಥಾಲಯ ಸೌಲಭ್ಯ ಸದುಪಯೋಗವಾಗಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಉಚಿತ
  • ತರಬೇತಿ
  • ಶಿಬಿರ
ಹೂವಿನಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಸಾರ್ವಜನಿಕ ಗ್ರಂಥಾಲಯದ ಪುಸ್ತಕ ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಎಸ್‌ಇಪಿ ಹಾಗೂ ಟಿಎಸ್‌ಪಿ ಅನುದಾನದಲ್ಲಿ ನಿರ್ಮಿಸಿರುವ ಪಟ್ಟಣದ ಶಾಖಾ ಗ್ರಂಥಾಲಯದ ಮೊದಲ ಮಹಡಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಅನೇಕ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ಮೂಲಕ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.
ಗ್ರಂಥಾಲಯ ಅಧಿಕಾರಿ ಬಿ.ನಾರಾಯಣ್ ದಾಸ್, ಹರಪನಹಳ್ಳಿ ಗ್ರಂಥಾಲಯ ಅಧಿಕಾರಿ ಮಂಜುನಾಥ ಭೋವಿ, ಕೆಆರ್‌ಐಡಿಎಲ್ ಎಇಇ ಜಯನಾಯ್ಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ, ನಿವೃತ್ತ ಶಿಕ್ಷಕ ಚಂದ್ರಪ್ಪ, ಗ್ರಾಪಂ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುರಿ, ತಾಲೂಕು ಅಧ್ಯಕ್ಷ ದೊಡ್ಡಬಸಪ್ಪ, ಮೇಲ್ವಿಚಾರಕರಾದ ಮರಿಯಪ್ಪ, ಮಲ್ಲಿಕಾರ್ಜುನ ಇತರರಿದ್ದರು.