ಕಂಪ್ಲಿ ಸೋಮಪ್ಪ ಕೆರೆ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಮುಖರಾದ ಜಗದೇವಪ್ಪ, ಡಾ.ಬಿ.ಶ್ರೀನಿವಾಸರೆಡ್ಡಿ, ಎಚ್.ಸಿ.ರಾಘವೇಂದ್ರ, ರಾಘವೇಂದ್ರ ಶ್ರೇಷ್ಠಿ, ಇಂದ್ರಜಿತ್‌ಸಿಂಗ್ ಇತರರಿದ್ದರು.
ಕಂಪ್ಲಿ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಶಿಕ್ಷಣ ಹಾಗೂ ಹುದ್ದೆ ಪಡೆಯಲು ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಗ್ರಂಥಾಲಯ ಸಹಾಯಕ ಜಗದೇವಪ್ಪ ಹೇಳಿದರು.
ಪಟ್ಟಣದ ಸೋಮಪ್ಪ ಕೆರೆ ಆವರಣದಲ್ಲಿನ ಸಾರ್ವಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಸಪ್ತಾಹ ನಿಮಿತ್ತ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿ.ಇಂದುಮುನಿ (ಪ್ರಥಮ), ಬಿ.ಸುಮಾ (ದ್ವಿತೀಯ), ಎನ್.ಹರೀಕಾ (ತೃತೀಯ), ಚಿತ್ರಕಲೆಯಲ್ಲಿ ಕೆ.ರೇಖಾ (ಪ್ರಥಮ), ಆಫ್ರೀನಾ, ಸುಹಾನಾ (ದ್ವಿತೀಯ), ಎ.ತುಳಸಿ ತೃತೀಯ ಸ್ಥಾನ ಪಡೆದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಚಂದ್ರಕಾಂತ ತಂಡ (ಪ್ರಥಮ), ಅನುಷಾ ಸಿಂಗ್ ತಂಡ (ದ್ವಿತೀಯ), ಸಂಧ್ಯಾ ತಂಡ (ತೃತೀಯ), ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಎ.ರೇಣುಕಾ, ಶರಣಬಸವ (ಪ್ರಥಮ), ಭಾವಗೀತೆ ಸ್ಪರ್ಧೆಯಲ್ಲಿ ಅಹ್ಮದ್ ಬಾಷಾ, ಭೂಮಿಕಾ ಪ್ರಥಮ ಬಹುಮಾನ ಪಡೆದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಶ್ರೀನಿವಾಸರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಆರ್‌ಒ ಸದಸ್ಯ ಡಾ.ಎಚ್.ಸಿ.ರಾಘವೇಂದ್ರ, ಕಚೇರಿ ಸಹಾಯಕ ಎಚ್.ಪ್ರಹ್ಲಾದ ನಾಯಕ, ಸೋಮಪ್ಪ ವಾಯುವಿಹಾರ ತಂಡದ ರಾಘವೇಂದ್ರ ಶ್ರೇಷ್ಠಿ, ಜಿ.ಎಂ.ಸುರೇಶ, ವಿಶ್ವನಾಥ ಸಜ್ಜನ, ಪತ್ರಿ ಮಂಜುನಾಥ, ವಿ.ಮೃತ್ಯುಂಜಯ, ಇಂದ್ರಜಿತ್‌ಸಿಂಗ್, ಕಾಲೇಜಿನ ಗ್ರಂಥಪಾಲಕ ಎ.ಜಿ.ವೀರಭದ್ರಪ್ಪ, ಉಪನ್ಯಾಸಕರಾದ ರಾಜ್ಮಾ ಟಿ.ಎಂ.ಆರ್., ಡಾ.ಕೆ.ಮಹೇಶ್, ಡಾ.ಚಂದ್ರಶೇಖರ ವಿ.ಬಿಳಿಗುಡ್ಡ, ಖಲೀಲ್ ಇತರರಿದ್ದರು.