ಚಿಕ್ಕಜಾಯಿಗನೂರಿನಲ್ಲಿ ಆಯೋಜಿಸಿದ್ದ ಗ್ರಾಮೀಣ ಕಲೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಚಾಲನೆ ನೀಡಿದರು.
ಕಂಪ್ಲಿ: ಗ್ರಾಮೀಣ ಕಲೆಗಳನ್ನು ರಕ್ಷಿಸುವಲ್ಲಿ ಪ್ರಗತಿಪರ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಹೇಳಿದರು.
ಚಿಕ್ಕಜಾಯಿಗನೂರಿನಲ್ಲಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮೀಣ ಕಲೋತ್ಸವಕ್ಕೆ ಚಾಲನೆ ನೀಡಿ, ಗ್ರಾಮೀಣ ಕಲೆ ರಕ್ಷಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಮದ ಪ್ರಮುಖ ಪಂಪನಗೌಡ ಮಾತನಾಡಿ, ಮಕ್ಕಳಲ್ಲಿ ಗ್ರಾಮೀಣ ಕಲೆಗಳನ್ನು ಪ್ರೇರೇಪಿಸುವಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರ್ ಟ್ರಸ್ಟ್ ಮುಂಚೂಣಿಯಲ್ಲಿದೆ ಎಂದರು. ಕಲಾವಿದರಾದ ಗುತ್ತಿಗನೂರು ರೇಣುಕರಾಜ ಗವಾಯಿ, ದೇವಲಾಪುರ ವಿರೂಪಾಕ್ಷಪ್ಪ, ಕಂಪ್ಲಿಯ ನಾಗರಾಜ ಸುಗಮ ಸಂಗೀತ ಪ್ರಸ್ತುತಪಡಿಸಿದರು.
ಸಣಾಪುರದ ಎಸ್.ಸಂಗೀತಾ ಕಲಾತಂಡ ಸಾಮೂಹಿಕ ನೃತ್ಯ ಪ್ರದರ್ಶನ ನೀಡಿತು.
ಪ್ರಮುಖರಾದ ಎಸ್.ಅಮರೇಗೌಡ, ಮರೇಗೌಡ, ಜೆ.ಭರಮರೆಡ್ಡಿ, ರಾಮನಗೌಡ, ಪಂಪನಗೌಡ, ಜಡೇಶ್ ಸ್ವಾಮಿ, ರವಿಗೌಡ, ಶಂಕರಗೌಡ, ಹನುಮಪ್ಪ, ಫಕೀರಪ್ಪ, ಹನುಮಪ್ಪ, ಮರಿರಾಜ, ರಾಘವೇಂದ್ರ, ಬ್ರಹ್ಮಾನಂದ, ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ್, ಖಜಾಂಚಿ ಮುದಿಯಪ್ಪ ಇತರರಿದ್ದರು.