ಎಮ್ಮಿಗನೂರಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಾಮದೇವ ಶಿವಾಚಾರ್ಯರು ಮಾತನಾಡಿದರು. ಪ್ರಮುಖರಾದ ಅಭಿನವ ಸಿದ್ದಲಿಂಗಸ್ವಾಮೀಜಿ, ಜಡೇಶತಾತ, ಬಿ.ಸದಾಶಿವಪ್ಪ, ಕೆ.ಪ್ರವೀಣ್, ಬಿ.ಮಹೇಶಗೌಡ, ಬಿ.ವಿ.ಗೌಡ ಇತರರಿದ್ದರು. 
ಬಳ್ಳಾರಿ

ದೇವಸ್ಥಾಗಳಲ್ಲಿ ಪಾವಿತ್ರೃತೆ ಕಾಪಾಡಿ

ಪ್ರಮುಖ ಮುಖ್ಯಾಂಶಗಳು

  • ವಾಮದೇವ ಶಿವಾಚಾರ್ಯರ ಆಶೀರ್ವಚನ
  • ದೇವಸ್ಥಾನ ಉದ್ಘಾಟನೆ

ಕಂಪ್ಲಿ: ದೇವಸ್ಥಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಪಾವಿತ್ರ್ಯತೆ ಕಾಪಾಡಲು ಸರ್ವರೂ ಮುಂದಾಗಬೇಕು ಎಂದು ಎಮ್ಮಿಗನೂರು ಹಂಪಿಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು ಹೇಳಿದರು.

ಎಮ್ಮಿಗನೂರು ಗ್ರಾಮದಲ್ಲಿ ಬುಧವಾರ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನಗಳು ಮನಸ್ಸಿಗೆ ಶಾಂತಿ, ನೆಮ್ಮದಿ, ಆಧ್ಯಾತ್ಮಿಕ ಸಂಸ್ಕಾರ ನೀಡುತ್ತವೆ. ನೀರನ್ನು ಕೃಷಿಗೆ ಸಮರ್ಪವಾಗಿ ಬಳಕೆ ಮಾಡಿಕೊಳ್ಳಬೇಕು. ಬರಗಾಲದಲ್ಲಿ ಭೂಮಿ ತಾಯಿಯನ್ನು ನಂಬಿ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಲು ರೈತರು ಜಾಗೃತಿ ತೋರಬೇಕು ಎಂದರು. ಮಲ್ಲಿಕಾರ್ಜುನ, ಗಣೇಶ, ನಂದಿ, ನಾಗ ಪ್ರತಿಮೆಗಳ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಅಭಿಷೇಕ, ಹೋಮ, ಭಜನೆ, ಉಡಿ ತುಂಬುವುದು, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹರಗಿನದೋಣಿ ಅಭಿನವ ಸಿದ್ದಲಿಂಗಸ್ವಾಮೀಜಿ, ಎಚ್.ವೀರಾಪುರ ಮಠದ ಜಡೇಶತಾತ, ಕಲ್ಬುರ್ಗಿ ಚಂದ್ರಶೇಖರ ಸ್ವಾಮೀಜಿ, ಪ್ರಮುಖರಾದ ಬಿ.ಸದಾಶಿವಪ್ಪ, ಕವಿತಾಳ ಪ್ರವೀಣ್, ಬೇರ‌್ಗಿ ಮಹೇಶಗೌಡ, ಮಂಜುನಾಥ, ಕೆ.ವಿ.ವೇದಮೂರ್ತಿ, ಬಿ.ವಿ.ಗೌಡ, ಜಿ.ನಾಗರೆಡ್ಡಿ, ಎನ್.ಸೂಗಪ್ಪ ಇತರರಿದ್ದರು.