ಗಗನಕ್ಕೇರಿದ ಎಲ್‌ಪಿಜಿ ದರ 
ಬಳ್ಳಾರಿ

ಗಗನಕ್ಕೇರಿದ ಎಲ್‌ಪಿಜಿ ದರ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಯುದ್ಧ
ಬಳ್ಳಾರಿ : ಅಮೆರಿಕ ಬೆಂಬಲಿತ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆ ನಗರಾದ್ಯಂತ ಆಟೋ ಎಲ್‌ಪಿಜಿ ದರ ಏರಿಕೆಯಾಗಿದೆ. ನಗರದಲ್ಲಿ ಹದಿನೈದು ದಿನಗಳ ಹಿಂದೆ ಪ್ರತಿ ಲೀಟರ್‌ಗೆ 64 ರೂ. ಇದ್ದ ಎಲ್‌ಪಿಜಿ ದರ, ಇದೀಗ ಬರೊಬ್ಬರಿ 84 ರೂ. ಬೆಲೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಲೀಟರ್‌ಗೆ 20ರಿಂದ 24 ರೂ. ಹೆಚ್ಚಳವಾಗಿದ್ದು, ದೈನಂದಿನ ದುಡಿಮೆ ನಂಬಿಕೊಂಡಿರುವ ಆಟೋ ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಗ್ಯಾಸ್ ಬೆಲೆ ಲೀಟರ್‌ಗೆ 20 ರೂಪಾಯಿ ಹೆಚ್ಚಾದರೂ, ಪ್ರಯಾಣಿಕರು ನಮಗೆ ನೀಡುವ ಬಾಡಿಗೆಯಲ್ಲಿ ಒಂದು ರೂಪಾಯಿಯೂ ಹೆಚ್ಚಿಗೆ ನೀಡುತ್ತಿಲ್ಲ. ದರ ಕೇಳಿದರೆ ಜಗಳಕ್ಕೆ ಬರುತ್ತಾರೆ ಎಂಬುದಾಗಿ ಆಟೋ ಚಾಲಕ ಕಾರ್ತಿಕ್ ಅಳಲು ತೋಡಿಕೊಂಡರು. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಎಲ್‌ಪಿಜಿ ದರ ಏರಿಕೆ ಮತ್ತಷ್ಟು ಹೊರೆಯಾಗಿದ್ದು, ಆಟೋ ಚಾಲಕರ ಬದುಕು ಈಗ ಸಂಕಷ್ಟಕ್ಕೆ ದೂಡಿದೆ.