ಸಿರಗುಪ್ಪದ ಪ್ರಾಕೃಪಸ ಸಂಘ ನಂ-2 ಹಾಗೂ ಬಿಡಿಸಿಸಿ ಬ್ಯಾಂಕ್ ಸಹಕಾರದಿಂದ ರೈತ ಎಚ್.ಶಿವಬಸನಗೌಡಗೆ ಟ್ರಾೃಕ್ಟರ್ ವಿತರಿಸಲಾಯಿತು. ಅಧ್ಯಕ್ಷ ಟಿ.ನಾಂಚರಯ್ಯ, ಉಪಾಧ್ಯಕ್ಷ ವೈ.ಮೂಕಣ್ಣ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಂತೋಷ್ ಕುಮಾರ್, ಸಿಬ್ಬಂದಿ ಇದ್ದರು. 
ಬಳ್ಳಾರಿ

ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ
ಸಿರಗುಪ್ಪ: ಪ್ರತಿ ವರ್ಷ ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಾಕೃಪಸಸ ನಂ-2 ಅಧ್ಯಕ್ಷ ಟಿ.ನಾಂಚರಯ್ಯ ಹೇಳಿದರು.
ಪಟ್ಟಣದ ಪ್ರಾಕೃಪಸಸ ನಂ-2 ಹಾಗೂ ಬಿಡಿಸಿಸಿ ಬ್ಯಾಂಕ್ ಸಹಕಾರದಿಂದ ಶುಕ್ರವಾರ ರೈತ ಎಚ್.ಶಿವಬಸನಗೌಡಗೆ ಟ್ರಾೃಕ್ಟರ್ ವಿತರಿಸಿ ಮಾತನಾಡಿದರು. ಸಹಕಾರ ಸಂಘಗಳು ಕೃಷಿ ಯಂತ್ರೋಪಕರಣ ಖರೀದಿಸಲು ಮಧ್ಯಮಾವಧಿ, ದೀರ್ಘಾವಧಿ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತವೆ ಎಂದರು. ಉಪಾಧ್ಯಕ್ಷ ವೈ.ಮೂಕಣ್ಣ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಂತೋಷ್ ಕುಮಾರ್, ಸಿಬ್ಬಂದಿ ಇದ್ದರು.