ಹರಪನಹಳ್ಳಿ ತಾಲೂಕು ಬಾಗಳಿ ಗ್ರಾಮದ ರಾಮನಗೌಡರ ಹಾಲಮ್ಮ ಚನ್ನನಗೌಡರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಹುಲಿಗೆಮ್ಮಗೆ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಪ್ಪ ಬಿ. ಕೂಲಹಳ್ಳಿ ಉಚಿತ ಲ್ಯಾಪ್‌ಟಾಪ್ ವಿತರಿಸಿದರು. ಪ್ರಮುಖರಾದ ಸಿ. ಚಿದಾನಂದ ಪಾಟೀಲ್, ಶಿವನಗೌಡ, ಮುಖ್ಯಶಿಕ್ಷಕ ಸುರೇಶ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ರೂಪಾವತಿ, ಶಿಕ್ಷಕರಾದ ಲೋಕೇಶ್, ಕೋಡಿಹಳ್ಳಿ ಮಂಜುನಾಥ ಇತರರಿದ್ದರು. 
ಬಳ್ಳಾರಿ

ನಡೆದ ಹಾದಿ ಮರೆಯದೆ ಬದುಕು ಸಾಗಿಸಿ

ಪ್ರಮುಖ ಮುಖ್ಯಾಂಶಗಳು

  • ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಪ್ಪ ಬಿ ಕೂಲಹಳ್ಳಿ ಹೇಳಿಕೆ
  • ಉಚಿತ ಲ್ಯಾಪ್‌ಟಾಪ್ ವಿತರಣೆ

ಹರಪನಹಳ್ಳಿ: ನಾವು ನಡೆದ ಬಂದ ಹಾದಿ ಮರೆಯಬಾರದು. ಅಕ್ಷರ ಕಲಿಸಿದ ಗುರುಗಳು-ಶಾಲೆಗೆ ಋಣಿಯಾಗಿರಬೇಕೆಂದು ಹಳೆಯ ವಿದ್ಯಾರ್ಥಿ, ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಪ್ಪ ಬಿ ಕೂಲಹಳ್ಳಿ ಹೇಳಿದರು.

ತಾಲೂಕಿನ ಬಾಗಳಿ ಗ್ರಾಮದ ರಾಮನಗೌಡರ ಹಾಲಮ್ಮ ಚನ್ನನಗೌಡರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಶನಿವಾರ ಮಾತನಾಡಿದರು. ನಾವು ಎಷ್ಟೇ ಎತ್ತರಕ್ಕೆ ಬೆಳದೆರೂ ಮೂಲ ಪರಂಪರೆ ಮರೆಯದಿದ್ದರೆ ದೇವರು ಒಳಿತು ಮಾಡುತ್ತಾನೆ.

ತಂತ್ರಜ್ಞಾನ ಬಳಕೆ ಹೆಚ್ಚಿದಂತೆ ಮಕ್ಕಳಲ್ಲಿ ಗುರು-ಹಿರಿಯರಿಗೆ ನೀಡುವ ಗೌರವ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು. ಪಾಲಕರು ಮಕ್ಕಳನ್ನು ಗುರಿ ಎಡೆಗೆ ಕೊಂಡೊಯ್ಯಲು ಜಾಗೃತರಾಗಬೇಕು ತಿಳಿಸಿದರು. ಹಳೆಯ ವಿದ್ಯಾರ್ಥಿಗಳಾದ ಬಸವರಾಜ ದಾದಾಪುರ, ಮಂಜುನಾಥ ಬಂಡ್ರಿ, ವಾಮದೇವ ಬಿ, ಪ್ರಮುಖರಾದ ಕೊಟ್ರಯ್ಯ ಎಚ್.ಎಂ, ಸಿ. ಬಸವರಾಜ, ಗುರುಬಸವರಾಜ ಇದ್ದರು.