ಕಾನಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ಕಲ್ಯಾಣ ಮಂಟಪದಲ್ಲಿ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು ಉದ್ಘಾಟಿಸಿದರು. ಪ್ರಾಚಾರ್ಯ ಸುಭಾಷ್‌ಚಂದ್ರ ಬೋಸ್‌ಬೋಸ್, ನಿವೃತ್ತ ಶಿಕ್ಷಕ ಶರಣಪ್ಪ, ಮುಖ್ಯಶಿಕ್ಷಕ ಬೊಮ್ಮಣ್ಣ, ಶಿಕ್ಷಕರಾದ ಪ್ರಕಾಶ ಪಾಟೇಲ್, ಮೋಹನ್ ಇದ್ದರು. 
ಬಳ್ಳಾರಿ

ಸಂಗೀತ ಆಲಿಸುವುದರಿಂದ ಏಕಾಗ್ರತೆ ವೃದ್ಧಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಅನಿಸಿಕೆ
  • ಸಂಗೀತ ಸಂಭ್ರಮೋತ್ಸವ

ಕಾನಹೊಸಹಳ್ಳಿ: ಮನಸ್ಸಿನ ಆತಂಕ ದೂರ ಮಾಡಿ ಶಾಂತಿ, ನೆಮ್ಮದಿ ನೀಡುವ ಅಗಾಧ ಶಕ್ತಿ ಸಂಗೀತಕ್ಕಿದೆ ಎಂದು ಕಾನಮಡುಗು ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ದಾ.ಮ. ಐಮಡಿ ಶರಣಾರ್ಯರು ಹೇಳಿದರು.

ಕಾನಮಡುಗು ದಾಸೋಹ ಮಠದ ಕಲ್ಯಾಣ ಮಂಟಪದಲ್ಲಿ ಮಾಳೆಹಳ್ಳಿ ಮಾತಂಗ ಜನಪದ ಸಾಂಸ್ಕೃತಿಕ ಕಲಾ ಸಂಘದಿಂದ ಬುಧವಾರ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನೋವು ನಿವಾರಿಸುವ ಹಾಗೂ ಮನಸ್ಸಿನ ಚಂಚಲತೆ ದೂರಮಾಡುವ ಚಿಕಿತ್ಸಕ ಗುಣ ಸಂಗೀತಕ್ಕಿದೆ. ಸಂಗೀತ ಆಲಿಸುವುದು ಅಥವಾ ಕಲಿಯುವುದರಿಂದ ಏಕಾಗ್ರತೆ ಹೆಚ್ಚಾಗಿ ಮಿದುಳಿನ ಸಾಮರ್ಥ್ಯ ವೃದ್ಧಿಸಲಿದೆ. ಗ್ರಾಮೀಣ ಭಾಗದ ಕಲಾವಿದರು ವಿವಿಧ ಕಲೆಗಳನ್ನು ಉಳಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಪ್ರಾಚಾರ್ಯ ಸುಭಾಷ್‌ಚಂದ್ರ ಬೋಸ್, ಮಾತಂಗ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಕಾರ್ಯದರ್ಶಿ ಮಾಳೆಹಳ್ಳಿ ತಿಪ್ಪೇಶ್, ಎನ್‌ಎಂಡಿಸಿ ನೌಕರ ಹಾಗೂ ನಾಟಕ ರಚನೆಕಾರ ಮೋಹನ್, ಗ್ರಾಪಂ ಮಾಜಿ ಸದಸ್ಯ ದಿನೇಶ್, ಮುಖ್ಯಶಿಕ್ಷಕ ಎಸ್.ಬೊಮ್ಮಣ್ಣ, ಶಿಕ್ಷಕರಾದ ಸಂತೋಷ್ ಕುಮಾರ್, ಪ್ರಕಾಶ್ ಪಾಟೀಲ್, ಭದ್ರಪ್ಪ, ಕಲಾವಿದರಾದ ಬೋರಪ್ಪ, ಸಿದ್ದಯ್ಯನಕೋಟೆ ಎಂ.ನುಂಕೇಶ್, ಸಕಲಾಪುರದಹಟ್ಟಿ ಯಲ್ಲಪ್ಪ, ಕುರಿಹಟ್ಟಿ ರಾಜು, ನಾಟಕ ನಿರ್ದೇಶಕ ಕೆಂಚಮಲ್ಲನಹಳ್ಳಿ ಸುರೇಶ್ ಇತರರಿದ್ದರು.