ಕಂಪ್ಲಿಯಲ್ಲಿ ಧಾರವಾಡ ಕರ್ನಾಟಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಸಭೆಯಲ್ಲಿ ಜ್ಯೋತಿಷಿ ಪ್ರಕಾಶ ವೈದ್ಯ ಮಾತನಾಡಿದರು.
ಕಂಪ್ಲಿ: ಆಸೆಗಳನ್ನು ನಿಯಂತ್ರಿಸಿದಾಗಲೇ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ ಎಂದು ಜ್ಯೋತಿಷಿ ಪ್ರಕಾಶ ವೈದ್ಯ ಹೇಳಿದರು.
ಪಟ್ಟಣದ ಕೆಎಚ್‌ಬಿ ಕಾಲನಿಯಲ್ಲಿ ಧಾರವಾಡ ಕರ್ನಾಟಕ ಕಾಲೇಜಿನ 1975ನೇ ಬ್ಯಾಚಿನ ವಿದ್ಯಾರ್ಥಿಗಳ ಸಮ್ಮಿಲನ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಹಿರಿಯರ ಆಚಾರ, ವಿಚಾರ, ಸಂಸ್ಕಾರವನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ. ಆಸೆಗಳನ್ನು ತ್ಯಜಿಸುತ್ತ ಸಾಗಿದಂತೆ ಜೀವನ ಸರಳವಾಗುತ್ತದೆ ಮತ್ತು ಇತರರಿಗೆ ಆದರ್ಶವಾಗುತ್ತದೆ ಎಂದರು.
ಎಎಸ್‌ಐ ಅವಿನಾಶ್ ಕಾಂಬ್ಳೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹಳೆಯ ವಿದ್ಯಾರ್ಥಿಗಳಾದ ಎಂ.ಎ.ಅಳವಂಡಿ, ಡಾ.ಎಸ್.ಎನ್.ಮೇಗೇರಿ, ಬಾಲಚಂದ್ರ ಯಾದವಾಡ, ಸೀತಾರಾಮ ಹೆಗಡೆ, ಕೆ.ಸಣ್ಣ ಗವಿಸಿದ್ದಪ್ಪ, ಎನ್.ಪಿ.ಶಂಕ್ರಯ್ಯಸ್ವಾಮಿ, ಜಿ.ಆರ್.ಯಾಳಗಿ, ಬಿ.ಎಸ್.ಕಲಬುರಗಿ, ಶ್ರೀಕಾಂತ ಟಿ.ತಂಗಾ, ವಾದಿರಾಜ ಮಂಗಳವೇಡಿ ಇತರರನ್ನು ಗೌರವಿಸಲಾಯಿತು. ಪ್ರಮುಖರಾದ ಕೃಷ್ಣ ವೈದ್ಯ, ಎಸ್.ಡಿ.ಬಸವರಾಜ, ಕೆ.ಮಂಜುನಾಥ, ಕೆ.ರಾಜಶೇಖರ ಇತರರಿದ್ದರು.