ಸಂಡೂರು ತಾಲೂಕು ಕುರೆಕುಪ್ಪ ಪುರಸಭೆಯಲ್ಲಿ ಯೋಗಿ ನಾರೇಯಣ ಯತೀಂದ್ರರ ಜಯಂತಿ ಆಚರಣೆ ಮಾಡಲಾಯಿತು.
ಸಂಡೂರು: ಕುರೇಕುಪ್ಪ ಪುರಸಭೆ ಸಭಾಂಗಣದಲ್ಲಿ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ಮಂಗಳವಾರ ಆಚರಣೆ ಮಾಡಲಾಯಿತು.
ಸದಸ್ಯ ಎನ್.ಸೋಮಪ್ಪ ಮಾತನಾಡಿ, ಭಕ್ತಿ, ಧ್ಯಾನ ಹಾಗೂ ಸನ್ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ. 18ನೇ ಶತಮಾನದ ಪ್ರಸಿದ್ಧ ಸಂತ, ಕವಿ ಮತ್ತು ಸಮಾಜ ಸುಧಾರಕರಾದ ಯೋಗಿ ನಾರೇಯಣ ಯತೀಂದ್ರರು ಯೋಗ ಮತ್ತು ಭಕ್ತಿ ಮಾರ್ಗ ಬೋಧಿಸುವುದರೊಂದಿಗೆ ಜಾತಿ ಪದ್ಧತಿ ಖಂಡಿಸಿದ್ದರು. ಇವರ ತತ್ವಪದಗಳು ಮತ್ತು ಕೈವಾರ ಕ್ಷೇತ್ರ ಪ್ರಸಿದ್ಧವಾಗಿದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಕೆ.ಸೂರಿನಾರಾಯಣ, ಮುಖ್ಯಾಧಿಕಾರಿ ಅರುಣ್ ಕುಮಾರ್, ಸದಸ್ಯರಾದ ಕಲ್ಗುಡೆಪ್ಪ, ಬಸವನಗೌಡ, ಪ್ರಮುಖರಾದ ಮಂಜುನಾಥ್, ಕರೀಂ, ಸಿಬ್ಬಂದಿ ವೆಂಕಟೇಶ್, ಬಸವರಾಜ್, ಶ್ರೀನಿವಾಸ್, ಹರ್ಷ, ಹೊನ್ನೂರಸ್ವಾಮಿ, ನಿಹಾರಿಕಾ, ಪಾವನಿ, ಹನುಮೇಶ್, ರಾಘವೇಂದ್ರ ಇತರರಿದ್ದರು.