ಕೊಟ್ಟೂರಿನ ಶ್ರೀ ಕರಿಬಸವಸ್ವಾಮಿ ಸಹಿಪ್ರಾ ಶಾಲೆಯಲ್ಲಿ ಮಕ್ಕಳ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಕೊಟ್ಟೂರೇಶ್ವರ, ಎಸ್ಡಿಎಂಸಿ ಅಧ್ಯಕ್ಷ ಗೋಣಿಬಸಪ್ಪ, ಸದಸ್ಯ ಮೈಲಪ್ಪ, ಶಿಕ್ಷಕರಾದ ಮಧುಮತಿ, ಜ್ಞಾನೇಶ್ವರಿ, ಎಂ.ಕರಿಬಸಮ್ಮ, ಪಿ.ರಹಿಮಾನ್ ಸಾಹೇಬ್, ಎಲ್.ವಾಲ್ಯನಾಯಕ್, ಬಿ.ಎಂ.ಭಾರತಿ, ಜಿ.ಟಿ.ಕವಿತಾ ಇದ್ದರು. 
ಬಳ್ಳಾರಿ

ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಶ್ರಮಿಸಲಿ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಕೊಟ್ಟೂರೇಶ್ವರ ಹೇಳಿಕೆ
  • ಅಕ್ಷರಭ್ಯಾಸ ಕಾರ್ಯಕ್ರಮ
ಕೊಟ್ಟೂರು: ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸಬೇಕು ಎಂದು ಮುಖ್ಯಶಿಕ್ಷಕ ಕೊಟ್ಟೂರೇಶ್ವರ ಹೇಳಿದರು.
ಶ್ರೀ ಕರಿಬಸವಸ್ವಾಮಿ ಸಹಿಪ್ರಾ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ ಮಕ್ಕಳಿಗೆ ಆಯೋಜಿಸಿದ್ದ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಪೂರ್ವ ಪ್ರಾಥಮಿಕ ಹಂತ ಮಕ್ಕಳ ಶೈಕ್ಷಣಿಕ ಜೀವನದ ಭದ್ರ ಬುನಾದಿಯಾಗಿದೆ. ಶಿಕ್ಷಕರ ಜತೆ ಪಾಲಕರು ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಶ್ರಮಿಸಬೇಕು ಎಂದರು.
ಅರ್ಚಕ ಕುಮಾರಸ್ವಾಮಿ ಅವರು ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಗೋಣಿಬಸಪ್ಪ, ಸದಸ್ಯ ಮೈಲಪ್ಪ, ಶಿಕ್ಷಕರಾದ ಮಧುಮತಿ, ಜ್ಞಾನೇಶ್ವರಿ, ಎಂ ಕರಿಬಸಮ್ಮ, ಪಿ.ರಹಿಮಾನ್ ಸಾಹೇಬ್, ಎಲ್.ವಾಲ್ಯನಾಯಕ್, ಬಿ.ಎಂ.ಭಾರತಿ, ಜಿ.ಟಿ.ಕವಿತಾ, ಭಾರತಿ ಇತರರಿದ್ದರು.