ಎಮ್ಮಿಗನೂರು ಗ್ರಾಮದಲ್ಲಿ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣಾ ಶಿಬಿರಕ್ಕೆ ಆಂಜನೇಯ ದೇವಸ್ಥಾನದ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ ಚಾಲನೆ ನೀಡಿದರು. ಪ್ರಮುಖರಾದ ಈಶ್ವರ್, ಆರ್.ಎನ್.ಮಂಜುಳಾ, ಸುಧಾ, ಪಾರ್ವತಿ, ಲಕ್ಷ್ಮೀ ಇತರರಿದ್ದರು. 
ಬಳ್ಳಾರಿ

ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲಿ

ಪ್ರಮುಖ ಮುಖ್ಯಾಂಶಗಳು

  • ಪ್ಲಾಸ್ಟಿಕ್ಳು
  • ಬ್ಯಾಗ್
  • ನಿವಾರಣೆಗೆ
ಕಂಪ್ಲಿ: ಆಕರ್ಷಕ ಬಟ್ಟೆ ಚೀಲಗಳನ್ನು ಹೊಲಿಯುವ ಮೂಲಕ ಜೀವನ ಸಾಗಿಸಲು ಸಾಧ್ಯ ಎಂದು ದೇವಸಮುದ್ರದ ಬಟ್ಟೆ ಚೀಲ ತಯಾರಕಿ ಅರಳಿ ಸುಧಾ ಹೇಳಿದರು.
ಎಮ್ಮಿಗನೂರು ಗ್ರಾಮದಲ್ಲಿ ಬುಧವಾರ ಜ್ಯೋತಿಬಾ ಫುಲೆ ಜ್ಞಾನ ವಿಕಾಸ ಕೇಂದ್ರ ಸದಸ್ಯೆಯರಿಗೆ ಸ್ವ ಉದ್ಯೋಗ ಪ್ರೇರಣಾ ಶಿಬಿರದಲ್ಲಿ ತರಬೇತಿ ನೀಡಿ, ಬಟ್ಟೆ ಚೀಲಗಳು ಪರಿಸರ ರಕ್ಷಕಗಳಾಗಿವೆ. ಪ್ಲಾಸ್ಟಿಕ್ ಬ್ಯಾಗ್ ನಿವಾರಣೆಗೆ ಬಟ್ಟೆ ಚೀಲಗಳು ಪರ್ಯಾಯವಾಗಿವೆ. ಬಟ್ಟೆಯಿಂದ ಶಾಲೆ ಬ್ಯಾಗ್, ಲಗೇಜ್‌ಬ್ಯಾಗ್, ಹ್ಯಾಂಡ್ ಪರ್ಸ್, ಲಂಚ್ ಬ್ಯಾಗ್, ಮೊಬೈಲ್ ಪೌಚ್ ಮೊದಲಾದವುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬಿ ಜೀವನ ಸಾಗಿಸಬಹುದು ಎಂದರು.
ಆಂಜನೇಯ ದೇವಸ್ಥಾನದ ಸಮಿತಿ ಅಧ್ಯಕ್ಷ ವೆಂಕಟರೆಡ್ಡಿ, ವಲಯ ಮೇಲ್ವಿಚಾರಕ ಈಶ್ವರ್, ಸಮನ್ವಯಾಧಿಕಾರಿ ಆರ್.ಎನ್.ಮಂಜುಳಾ, ಅತಿಥಿ ಶಿಕ್ಷಕ ಎಸ್.ರಾಮಪ್ಪ, ಕೇಂದ್ರದ ಅಧ್ಯಕ್ಷೆ ಪಾರ್ವತಿ, ಸೇವಾ ಪ್ರತಿನಿಧಿ ಲಕ್ಷ್ಮೀ ಇತರರಿದ್ದರು.