ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಅಗ್ನಿ ಬನ್ನಿರಾಯ ಜಯಂತಿ ಆಚರಿಸಲಾಯಿತು. ಉಪ ತಹಸೀಲ್ದಾರ್ ರಾಘವೇಂದ್ರ, ಶಿರಸ್ತೇದಾರ್ ಬಿ.ಮದ್ದಿಲೇಟಿ, ಬಿಸಿಎಂ ವಿಸ್ತರಣಾಧಿಕಾರಿ ಅಹಮ್ಮದ್, ಸಿಬ್ಬಂದಿಗಳಾದ ಮಂಜುನಾಥ, ಪ್ರಸನ್ನ, ಚಂದ್ರಪ್ಪ, ಮಲ್ಲಿಕಾರ್ಜುನ, ಓಬಳೇಶ, ಮದಿಹಾ, ಅರ್ಪಿತಾ, ಸಿಂಧು ಇತರರಿದ್ದರು. ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದ ವತಿಯಿಂದ ಅಗ್ನಿ ಬನ್ನಿರಾಯ ಜಯಂತಿ ಆಚರಿಸಲಾಯಿತು. ಉಪ ತಹಸೀಲ್ದಾರ್ ರಾಘವೇಂದ್ರ, ಶಿರಸ್ತೇದಾರ್ ಬಿ.ಮದ್ದಿಲೇಟಿ, ಬಿಸಿಎಂ ವಿಸ್ತರಣಾಧಿಕಾರಿ ಅಹಮ್ಮದ್, ಸಿಬ್ಬಂದಿಗಳಾದ ಮಂಜುನಾಥ, ಪ್ರಸನ್ನ, ಚಂದ್ರಪ್ಪ, ಮಲ್ಲಿಕಾರ್ಜುನ, ಓಬಳೇಶ, ಮದಿಹಾ, ಅರ್ಪಿತಾ, ಸಿಂಧು ಇತರರಿದ್ದರು. 
ಬಳ್ಳಾರಿ

ಮಹಾತ್ಮರ ಆದರ್ಶಗಳನ್ನು ಪಾಲಿಸಲಿ

ಪ್ರಮುಖ ಮುಖ್ಯಾಂಶಗಳು

  • ಮಹಾತ್ಮರ
  • ಆದರ್ಶಗಳನ್ನು
  • ಬದುಕಿನಲ್ಲಿ
ಕೂಡ್ಲಿಗಿ: ಅಗ್ನಿ ಬನ್ನಿರಾಯ ಸಮುದಾಯದವರು ಸ್ವಾಭಿಮಾನ, ಶ್ರಮ ಮತ್ತು ವೀರತ್ವದ ಸಂಕೇತವಾಗಿದ್ದಾರೆ ಎಂದು ಉಪ ತಹಸೀಲ್ದಾರ್ ರಾಘವೇಂದ್ರ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಅಗ್ನಿ ಬನ್ನಿರಾಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಯಂತಿಗಳು ಜೀವನಕ್ಕೆ ಬೆಳಕಾಗಬೇಕು. ಮಹಾತ್ಮರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಜೀವನಕ್ಕೆ ಅರ್ಥ ಬರುತ್ತದೆ. ತಿಗಳ ಕ್ಷತ್ರಿಯ ಸಮಾಜದ ಮೂಲ ಪುರುಷ ಅಗ್ನಿ ಬನ್ನಿರಾಯ, ವೀರತ್ವದ ಸಂಕೇತ ಅಗ್ನಿ ಬನ್ನಿರಾಯ, ಅಗ್ನಿಯು ಹಿಂದು ದೇವತೆ ಅವನನ್ನು ಮಾನವಕುಲದ ಸ್ನೇಹಿತ ಮತ್ತು ರಕ್ಷಕ ಎಂದು ಪರಿಗಣಿಸಲಾಗುತ್ತದೆ.
ವೇದಗಳು ಯಾವುದೇ ಇತರ ದೇವತೆಗಿಂತ ಅವನಿಗೆ ಹೆಚ್ಚಿನ ಸ್ತೋತ್ರಗಳನ್ನು ಹೊಂದಿವೆ. ಅವನನ್ನು ಇಂದಿಗೂ ಸರ್ವವ್ಯಾಪಿ ಎಂದು ಪರಿಗಣಿಸಲಾಗುತ್ತದೆ. ಆದರೆ ನೇರವಾಗಿ ಪೂಜಿಸಲಾಗುವುದಿಲ್ಲ. ಅಗ್ನಿ ಎಲ್ಲ ಜನರ ಆಲೋಚನೆಗಳನ್ನು ತಿಳಿದಿದ್ದಾನೆ ಮತ್ತು ಎಲ್ಲಾ ಪ್ರಮುಖ ಕ್ರಿಯೆಗಳಿಗೆ ಸಾಕ್ಷಿಯಾಗಿದ್ದಾನೆ ಎಂದರು.