ಬ್ರ.ಕು. ಜಗದಂಬಾ ಸರಸ್ವತಿ 
ಬಳ್ಳಾರಿ

ಸಹನೆ, ತಾಳ್ಮೆ, ವಿನಯತೆ ರೂಢಿಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಸತ್ಯಯುಗ
  • ಸ್ಥಾಪನೆಗಾಗಿ
  • ಆತ್ಮ
ಕಂಪ್ಲಿ: ಸತ್ಯಯುಗದ ಸ್ಥಾಪನೆಗಾಗಿ ಆತ್ಮದಲ್ಲಿನ ಮೂಲ ಆದಿಶಕ್ತಿ ಗುಣಗಳನ್ನು ಅಧ್ಯಾತ್ಮದ ಮೂಲಕ ಜಾಗೃತಿಗೊಳಿಸಲು ಬ್ರ.ಕು.ಜಗದಂಬಾ ಸರಸ್ವತಿಯವರು ಜೀವನ ಸವೆಸಿದರು ಎಂದು ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರ.ಕು.ಸಕಲೇಶ್ವರಿ ಹೇಳಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಬ್ರ.ಕು. ಜಗದಂಬಾ ಸರಸ್ವತಿಯವರ ಸ್ಮತಿ ದಿನಾಚರಣೆಗೆ ಚಾಲನೆ ನೀಡಿ, 1930ರ ದಶಕದಲ್ಲಿ ಜಗದಂಬಾ ಸರಸ್ವತಿಯವರು ಪ್ರತಿಯೊಬ್ಬರಲ್ಲಿ ಶುದ್ಧತೆ, ಸಹನೆ, ತಾಳ್ಮೆ, ವಿನಯತೆಗಳನ್ನು ರಾಜಯೋಗ ಶಿಕ್ಷಣ ಮೂಲಕ ಪ್ರೇರೇಪಿಸಿದರು.
ಮನುಕುಲದ ಉದ್ಧಾರಕ್ಕಾಗಿ, ವಿಶ್ವಕಲ್ಯಾಣಕ್ಕಾಗಿ ಜೀವನ ಅರ್ಪಿಸಿದರು ಎಂದರು. ಮಾದಕ ದ್ರವ್ಯ ನಿರ್ಮೂಲನ ಆಂದೋಲನ ಪ್ರಯುಕ್ತ ನಶೆಮುಕ್ತ ಪ್ರತಿಜ್ಞೆ ಬೋಧಿಸಲಾಯಿತು. ಓಂ ಶಾಂತಿ ಸಾಧಕರಾದ ಅಚ್ಚಪ್ಪ ಶರಣಪ್ಪ, ಸರಸ್ವತಿ ಜೆಪಿಶಾಸ್ತ್ರಿ, ಹನುಮಂತಪ್ಪ, ಅಂಬರೀಷ, ಕೆ.ರಾಮಣ್ಣ, ವೆಂಕಟಸ್ವಾಮಿರೆಡ್ಡಿ, ಬಸಮ್ಮ, ಹಂಪಮ್ಮ, ವಿರುಪಮ್ಮ ಸೇರಿ ಸಾಧಕರಿದ್ದರು.