ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಡಾ.ರವೀಂದ್ರ ಕನಕೇರಿ, ಡಾ.ವೀರೇಶ್, ರೇಣುಕಾ, ಕೆ.ಶೋಭಾ ಇತರರಿದ್ದರು. 
ಬಳ್ಳಾರಿ

ನಾವಿಬ್ಬರು ನಮಗಿಬ್ಬರು ಕಲ್ಯಾಣ ಸಂದೇಶ ಅನುಸರಿಸಲಿ

ಕಂಪ್ಲಿ: ನಾವಿಬ್ಬರು ನಮಗಿಬ್ಬರು ಕುಟುಂಬ ಕಲ್ಯಾಣ ಸಂದೇಶವನ್ನು ಪ್ರತಿ ಕುಟುಂಬ ಪಾಲಿಸಬೇಕು ಎಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಹೇಳಿದರು.
ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲ ಮತ್ತು ಎರಡನೇ ಮಗುವಿಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳನ್ನು ಅರಿತು ಅನುಸರಿಸಬೇಕಿದೆ. ದೇವರು ಮತ್ತು ಕರ್ಮದ ನಂಬಿಕೆಗಳಿಗೀಡಾಗಿ ಕುಟುಂಬ ಕಲ್ಯಾಣ ವಿಧಾನಗಳನ್ನು ಅಲಕ್ಷಿಸಬಾರದು. ಅನಪೇಕ್ಷಿತ ಮಗುವನ್ನು ಪಡೆಯದಿರಲು ಶಾಶ್ವತ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣ ಕುರಿತ ಮಾಹಿತಿ, ಸಂವಹನ ಮತ್ತು ಶಿಕ್ಷಣದ ಬಗ್ಗೆ ಭಿತ್ತಿಪತ್ರ ಪ್ರದರ್ಶಿಸಿ, ಕರಪತ್ರಗಳನ್ನು ವಿತರಿಸಲಾಯಿತು. ಅರವಳಿಕೆ ತಜ್ಞ ಡಾ.ವೀರೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಶೋಭಾ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿ, ಬಾಣಂತಿಯರು, ನಾಗರಿಕರು ಪಾಲ್ಗೊಂಡಿದ್ದರು.