ಬಾಗೇವಾಡಿ ಕಾಲುವೆ ಡಿಸ್ಟ್ರಿಬ್ಯೂಟರ್‌ನ ಅಕ್ರಮ ಪಂಪ್‌ಸೆಟ್ ತೆಗೆವಿಗೆ ಆಗ್ರಹಿಸಿ ಬಳ್ಳಾರಿ ಡಿಸಿ ಕಚೇರಿ ಮುಂದೆ ನೀರು ಬಳಕೆದಾರರ ಸಂಘ ಪ್ರತಿಭಟನೆ ನಡೆಸಿತು. ಅಧ್ಯಕ್ಷ ಬಂದೇ ನವಾಜ್, ಪ್ರಮುಖರಾದ ಜ್ಞಾನಾನಂದ ಸ್ವಾಮಿ, ನೆಣಿಕಪ್ಪ, ಮರಿನಾಗಪ್ಪ, ಕೇಶವ, ಖಾದರ್‌ಬಾಷಾ, ಆಲಂ ಬಾಷಾ, ಜಡೆ ನಾಗರಾಜ ಇತರರಿದ್ದರು. 
ಬಳ್ಳಾರಿ

ಅನಧಿಕೃತ ಪೈಪ್‌ಲೈನ್ ತೆರವುಗೊಳಿಸಲಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕೆ.ನಾಗೇಂದ್ರಪ್ರಸಾದ್‌ಗೆ ಮನವಿ

ಸಿರಿಗೇರಿ: ಸಮೀಪದ ತೆಕ್ಕಲಕೋಟೆ ತುಂಗಭದ್ರಾ ಕೆಳಮಟ್ಟದ ಬಾಗೇವಾಡಿ ಉಪಕಾಲುವೆಯ ಮೇಲ್ಭಾಗದಲ್ಲಿನ ಅನಧಿಕೃತ ಪಂಪ್‌ಸೆಟ್ ಹಾಗೂ ಅಕ್ರಮ ಪೈಪ್‌ಲೈನ್ ತೆರವಿಗೆ ಒತ್ತಾಯಿಸಿ ನೀರು ಬಳಕೆದಾರರ ಸಂಘದಿಂದ ಸೋಮವಾರ ಡಿಸಿ ಕೆ.ನಾಗೇಂದ್ರಪ್ರಸಾದ್‌ಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಬಂದೇ ನವಾಜ್ ಮಾತನಾಡಿ, ಕಾಲುವೆಗೆ ನೀರು ಹರಿಸಿದ್ದು, ಅಧಿಕೃತ ನೀರಾವರಿ ಇರುವ ರೈತರು ಇದನ್ನು ನಂಬಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆದರೆ, ಉಪಕಾಲುವೆಗೆ ಹಾಕಿದ ಅನಧಿಕೃತ ಪೈಪ್‌ಲೈನ್ ತೆರವುಗೊಳಿಸಬೇಕು. ಇಲ್ಲವಾದರೆ ಕಾಲುವೆ ಕೆಳಭಾಗದ ತೆಕ್ಕಲಕೋಟೆ, ಉಪ್ಪಾರ ಹೊಸಳ್ಳಿ, ಬಲಕುಂದಿ, ಅರಳಿಗನೂರು, ಪೋಪ್ಪನಾಳು, ಹಳೇಕೋಟೆ ಗ್ರಾಮಗಳ ನೂರಾರು ಹೆಕ್ಟೇರ್ ಭತ್ತ ಹಾಗೂ ತೋಟಗಾರಿಕೆ ಬೆಳೆಗಳು ಕೈಗೆ ಬರುವ ಸಂದರ್ಭದಲ್ಲಿ ನೀರಿನ ಕೊರತೆಯಿಂದ ನಷ್ಟ ಉಂಟಾಗಲಿದೆ. ಅಕ್ರಮ ಪಂಪ್‌ಸೆಟ್ ಹಾಗೂ ಪೈಪ್‌ಲೈನ್ ಹಾವಳಿಯಿಂದ ಅಚ್ಚುಕಟ್ಟು ರೈತರಿಗೆ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಜ್ಞಾನಾನಂದ ಸ್ವಾಮಿ, ನೆಣಿಕಪ್ಪ, ಮರಿನಾಗಪ್ಪ, ಕೇಶವ, ಖಾದರ್‌ಬಾಷಾ, ಆಲಂ ಬಾಷಾ, ಜಡೆ ನಾಗರಾಜ, ಬಿ.ಬಸಪ್ಪ, ಗಾಮ ಮಲ್ಲಯ್ಯ, ವೀರೇಶ, ಉಪ್ಪಾರ ಹೊಸಳ್ಳಿ ರಾಜಪ್ಪ, ಎನ್.ಚಾಂದು, ರಂಗಪ್ಪ, ರಾಮ, ಮಹ್ಮದ್ ಸಾಬ್ ಇತರರಿದ್ದರು.