ಕಂಪ್ಲಿಯಲ್ಲಿ ಗೋಮಾತೆಯ ಗೌರವದ ಅಭಿಯಾನ ಪಾದಯಾತ್ರೆ ನಡೆಯಿತು.  
ಬಳ್ಳಾರಿ

ಅಗತ್ಯ ಕಾನೂನು ರಚಿಸಲಿ

ಅಶೋಕ್ ಕುಮಾರ್ ಎನ್
ಕಂಪ್ಲಿ: ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಾಗಿ ದಿಟ್ಟ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಪಟ್ಟಣದ ಗೋ ಸೇವಕರು ಸೋಮವಾರ ಮನವಿ ಸಲ್ಲಿಸಿದರು.
ಗೋಸೇವಕ ಗೊರ್ತಿ ಶ್ರೀನಿವಾಸುಲು ಮಾತನಾಡಿ, ಬಿಡಾಡಿ ದನಗಳ ಸೇವೆಗಾಗಿ ಎಲ್ಲ ರಾಜ್ಯಗಳಲ್ಲಿ ಗೋಶಾಲೆ ತೆರೆಯಲು ಅನುದಾನ ನೀಡಬೇಕು. ಸಮಗ್ರ ಗೋ ರಕ್ಷಣೆಗಾಗಿ ಅಗತ್ಯ ಕಾನೂನು ರಚಿಸಿ ಅನುಷ್ಠಾನಗೊಳಿಸಬೇಕು. ಗೋ ಸೇವೆ, ಗೋ ರಕ್ಷಣೆ, ಗೋ ಗೌರವಕ್ಕಾಗಿ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದಲ್ಲಿ ಹಂತ ಹಂತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಭವ ಮಹಾಗಣಪತಿ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ಗೋಮಾತೆ ಗೌರವ ಅಭಿಯಾನ ಪಾದಯಾತ್ರೆ ನಡೆಯಿತು. ಗೋಸೇವಕರಾದ ಕೃಷ್ಣ, ಎಂ.ಕೆ.ಗೋವಿಂದ, ಕೆ.ಎಂ.ಬಸವರಾಜಶಾಸ್ತ್ರಿ, ಎಚ್.ಸತೀಶ್, ಡಾ.ರಾಮು, ಸೋಮನಗೌಡ ದೇವಲಾಪುರ, ಯಣ್ಣಿ ವೆಂಕಟೇಶ, ಎಲಿಗಾರ ವೆಂಕಟರೆಡ್ಡಿ, ಎನ್.ಎಂ.ಪತ್ರೆಯ್ಯಸ್ವಾಮಿ, ಡಿ.ವಿ.ಸತ್ಯನಾರಾಯಣ, ಸೋಗಿ ಸಂತೋಷ್, ಎಲ್‌ಐಸಿ ಈರಣ್ಣ, ಉಗಾದಿ ಬಸವರಾಜ, ಪ್ರಭು, ಟಿ.ಕೃಷ್ಣ ಇತರರಿದ್ದರು.