ಕಂಪ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಲೀಕ್ ಔಟ್ ಪ್ರಯೋಗಕ್ಕೆ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಚಾಲನೆ ನೀಡಿದರು. ನಟಿ ಅಕ್ಷತಾ ಪಾಂಡವಪುರ, ಪ್ರಮುಖರಾದ ಡಾ.ಮಹೇಶ್, ಡಾ.ಅನ್ನಪೂರ್ಣ ಗುಡದೂರ, ರಾಜ್ಮಾ ಟಿ.ಎಂ.ಆರ್., ಎಂ.ಪಿ.ಬಾಲಾಜಿ ಇತರರಿದ್ದರು.
- ಕಂಪ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ
- ಲೀಕ್ ಔಟ್ ಪ್ರಯೋಗ ಪ್ರದರ್ಶನ,
- ಸಿರಿಗೇರಿಯ ಅನ್ನಪೂರ್ಣ ಕ್ರಿಯೇಷನ್ಸ್ , ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘಗಳ ಸಹಯೋಗ
- ಕನ್ನಡ ಹಿತರಕ್ಷಕ ಸಂಘಗಳ ಸಹಯೋಗ
ಕಂಪ್ಲಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಲೀಕ್ ಔಟ್ ಪ್ರಯೋಗ ಪ್ರದರ್ಶನ, ನಟಿ ಅಕ್ಷತಾ ಪಾಂಡವಪುರ, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಚಾಲನೆ, ಸಿರಿಗೇರಿಯ ಅನ್ನಪೂರ್ಣ ಕ್ರಿಯೇಷನ್ಸ್ ಹಾಗೂ ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘಗಳ ಸಹಯೋಗ
ಕಂಪ್ಲಿ: ಸಿರಿಗೇರಿಯ ಅನ್ನಪೂರ್ಣ ಕ್ರಿಯೇಷನ್ಸ್ ಹಾಗೂ ಕಂಪ್ಲಿಯ ಕನ್ನಡ ಹಿತರಕ್ಷಕ ಸಂಘಗಳ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಕ್ಷತಾ ಪಾಂಡವಪುರ ಅಭಿನಯದಲ್ಲಿ ಸೋಮವಾರ ಲೀಕ್ ಔಟ್ ಪ್ರಯೋಗ ಪ್ರದರ್ಶನಗೊಂಡಿತು.
ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ. ಹೇಮಯ್ಯಸ್ವಾಮಿ ಚಾಲನೆ ನೀಡಿ, ಕಥೆಯನ್ನು ವಿವರಿಸುತ್ತಲೇ ಪ್ರೇಕ್ಷಕರ ಮನದಾಳದ ಆಶಯಗಳನ್ನು ಅರಿಯುವ ನಟಿ ಅಕ್ಷತಾ ಪ್ರಯೋಗ ವಿಭಿನ್ನವಾಗಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀ ಶೋಷಣೆಗೆ ಒಳಗಾಗುತ್ತಿದ್ದು, ಮುಖ್ಯವಾಹಿನಿಗೆ ತರುವ ಪುರುಷರ ಆಶಯಗಳನ್ನು ಪರೋಕ್ಷವಾಗಿ ಬಿಂಬಿಸುತ್ತದೆ. ಇಂತಹ ವೈಚಾರಿಕ ಹಿನ್ನೆಲೆಯ ಪ್ರಯೋಗಗಳು ನಿರಂತರ ನಡೆಯಬೇಕಿವೆ ಎಂದರು.
ನಟಿ ಅಕ್ಷತಾ ಪಾಂಡವಪುರ ಮಾತನಾಡಿ, ವಸುಧೇಂದ್ರರ ಹುಲಿಗೆಮ್ಮ ಕಥೆಯನ್ನು ಪ್ರಯೋಗದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಉಂಟಾದ ಭಾವನೆಗಳನ್ನು ಪ್ರಸ್ತುತಪಡಿಸುವ ಮೂಲಕ ಜನರಲ್ಲಿ ಬದಲಾವಣೆ ಬಯಸುತ್ತೇನೆ. ಕಥೆ, ಪಾತ್ರಗಳು ಪುಸ್ತಕಕ್ಕೆ ಸೀಮಿತವಾಗಿರದೆ, ಬದುಕಿನಲ್ಲಿ ಹಾಸುಹೊಕ್ಕಾಗಿದ್ದು, ವಿಭಿನ್ನ ನೆಲೆಯ ಹುಡುಕಾಟದ ಅವಿಷ್ಕಾರದಲ್ಲಿ ಪ್ರಯೋಗಗಳನ್ನು ಪ್ರದರ್ಶಿಸಿದ್ದು, ಇದು 120ನೇ ಪ್ರಯೋಗ ಎಂದರು.
ಈ ಪ್ರಯೋಗ ನಾಟಕದ ಎಲ್ಲೆಗಳನ್ನು ಪಾತ್ರ ಮೀರಿದ್ದು, ಕಂಡವರ ವಿಷಯಗಳ ಮೇಲೆ ಹೆಚ್ಚಿನ ಆಸಕ್ತಿ ತೋರಿಸುವುದು, ಸ್ತ್ರೀಯರ ಮೇಲೆ ಕಟ್ಟುಪಾಡುಗಳನ್ನು ಹೇರಿರುವುದು, ಸಮಾಜದ ಕಟ್ಟುಪಾಡುಗಳಿಗೆ ಕಟ್ಟುಬಿದ್ದು ಬದಲಾಗ ದಿರುವುದು ಮೊದಲಾದ ಪುರುಷ, ಮಹಿಳೆಯರ ಒಳ ತುಮುಲಗಳನ್ನು ಹೊರತೆಗೆಯುವಲ್ಲಿ ಪ್ರಯೋಗ ಯಶಸ್ವಿಯಾಗಿದೆ. ರಂಗಮಂದಿರ ದಿಂದ ದೂರವಾಗಿ ಪ್ರೇಕ್ಷಕರ ಬಳಿಗೆ ತೆರಳಿ ಪ್ರಯೋಗದ ಮೂಲಕ ಸಮಾಜದ ನಾನಾ ಪಾತ್ರಗಳ ಆಂತರ್ಯ ಅರಿಯುವ ಪ್ರಯತ್ನ ದಲ್ಲಿದ್ದೇನೆ ಎಂದರು.
ಪ್ರಭಾರ ಪ್ರಾಚಾರ್ಯ ಡಾ.ಕೆ. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ನಿರ್ದೇಶಕ ಕೆ.ಯಂಕಾರೆಡ್ಡಿ, ಸಹಾಯಕ ಪ್ರಾಧ್ಯಾಪಕ ಡಾ.ಅನ್ನಪೂರ್ಣ ಗುಡದೂರು, ಎಂ.ಪಿ. ಬಾಲಾಜಿ, ಟಿ.ಎಂ.ಆರ್. ರಾಜ್ಮಾ, ಖಲೀಲ್, ಗ್ರಂಥಪಾಲಕ ಎ.ಜಿ. ವೀರಭದ್ರಪ್ಪ, ಪ್ರಮುಖರಾದ ಎಸ್.ಡಿ. ಬಸವರಾಜ, ಅಶೋಕ್ ಕುಕನೂರು, ಡಾ. ಶಾರದಾ ಜಗನ್ನಾಥ ಹಿರೇಮಠ, ಕಲ್ಗುಡಿ ನಾಗರತ್ನ ಇದ್ದರು.