ಕಂಪ್ಲಿ ಪೇಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಆಚರಿಸಲಾಯಿತು.
ಕಂಪ್ಲಿ: ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಅನುಕರಣೀಯವಾಗಿದ್ದು, ಅವರಿಗೆ ಭಾರತರತ್ನ ಪುರಸ್ಕಾರ ನೀಡುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ನಾಗರಾಜ ಒತ್ತಾಯಿಸಿದರು.
ಪಟ್ಟಣದ ಪೇಟೆಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 119ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಶಿವಕುಮಾರ ಸ್ವಾಮೀಜಿ ಸಹಸ್ರಾರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ನಾಡಿಗೆ ಉಪಕಾರ ಮಾಡಿದ್ದಾರೆ. ಪಟ್ಟಣದ ರಸ್ತೆ, ವೃತ್ತಕ್ಕೆ ಸ್ವಾಮೀಜಿ ಹೆಸರಿಡುವ ಮೂಲಕ ಗೌರವ ಸಲ್ಲಿಸುವಲ್ಲಿ ಪುರಸಭಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪ್ರಮುಖರಾದ ಶರಣಪ್ಪ ಸಜ್ಜನರ, ಮಂಜುನಾಥ ಸಜ್ಜನರ, ವಿಶ್ವನಾಥ ಸಜ್ಜನರ, ವಾಲಿ ಕೊಟ್ರಪ್ಪ, ಕೆ.ಎಂ.ಚಂದ್ರಶೇಖರ, ಇಂದ್ರಜಿತ್ ಸಿಂಗ್, ಕೆ.ಸಿ.ಸಿದ್ದರಾಮೇಶ್ವರ, ಎಸ್.ಎಂ.ಗುರುಪ್ರಸನ್ನ, ಜಿ.ಚಂದ್ರಶೇಖರಗೌಡ, ಬಿ.ವಿ.ಗೌಡ, ಬಿ.ಎಂ.ರುದ್ರಯ್ಯ, ನವೀನ್ ಬಾಗ್ರೇಚಾ, ಗಡಾದ ಪ್ರಸಾದ್, ಸಂತೋಷ್ ಸೋಗಿ, ಎಚ್.ಎಸ್.ವೀರೇಶ್ ಇತರರಿದ್ದರು.