ಕೊಟ್ಟೂರಿನ ಸರ್ಕಾರಿ ಕಾಲೇಜ್ ಮೈದಾನದಲ್ಲಿ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು. ತಹಸೀಲ್ದಾರ್ ಜಿ.ಕೆ.ಅಮರೇಶ್, ಶಾಸಕ ನೇಮಿರಾಜ್ ನಾಯ್ಕ, ತಾಪಂ ಇಒ ಡಾ.ಬಿ.ಆನಂದ ಕುಮಾರ್, ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ,ಇಸಿಒ ನಿಂಗಪ್ಪ ಇತರರಿದ್ದರು. 
ಬಳ್ಳಾರಿ

ಸರ್ಕಾರ ರೈತರ ಬೆನ್ನೆಲುಬಾಗಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿಕೆ
  • 80ನೇ ಸ್ವಾತಂತ್ರ್ಯೋತ್ಸವ

ಕೊಟ್ಟೂರು: ಬರಗಾಲದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು ಸರ್ಕಾರ ಪರಿಹಾರ ನೀಡಬೇಕು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.

ಗೊರ್ಲಿ ಶರಣಪ್ಪ ಸರ್ಕಾರಿ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ದೇಶಾಭಿಮಾನ ಮೈಗೂಡಿಸಿಕೊಂಡು ಸಾಧನೆ ಮಾಡಬೇಕು ಎಂದರು. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ತಹಸೀಲ್ದಾರ್ ಜಿ.ಕೆ.ಅಮರೇಶ್, ತಾಪಂ ಇಒ ಡಾ.ಬಿ.ಆನಂದ ಕುಮಾರ್, ಪೋಲಿಸ್ ಇನ್ಸ್ ಪೆಕ್ಟರ್ ಡಿ.ದುರುಗಪ್ಪ ,ಪಪಂ ಮುಖ್ಯಾಧಿಕಾರಿ ಎ.ನಸುರುಲ್ಲಾ, ಇಂಜಿನೀಯರ್ ಸಿದ್ದಯ್ಯ, ಸನೌಸಂಘದ ತಾಲೂಕು ಅಧ್ಯಕ್ಷ ಯೋಗೀಶ್ ದಿನ್ನೆ, ಕಸಾಪ ತಾಲೂಕು ಅಧ್ಯಕ್ಷ ಡಿ.ಕೊಟ್ರೇಶ, ಸಪಪೂ ಕಾಲೇಜ್ ಪ್ರಾಚಾರ್ಯ ಜಿ.ಸೋಮಶೇಖರ್, ಉಪಪಾಚಾರ್ಯೆ ಕೊಟ್ರಮ್ಮ, ಇಸಿಒ ನಿಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಅನ್ನಪೂರ್ಣ ಇತರರಿದ್ದರು.