ಪ್ರತಿ ವರ್ಷ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಲಿ ಎಂದು ನಂ.10 ಮುದ್ದಾಪುರ ಗ್ರಾಮದಲ್ಲಿ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿಗೆ ಸಮುದಾಯದವರು ಮನವಿ ಸಲ್ಲಿಸಿದರು. ದೇವಾಂಗ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಕೆ.ಕೊಮಾರೆಪ್ಪ, ಪದಾಧಿಕಾರಿಗಳಾದ ಬುದ್ಧಿ ಶ್ರೀನಿವಾಸಪ್ಪ, ಗಂಜಿ ಮಂಜುನಾಥ, ಕನಕ ಬಸವರಾಜ, ಪಿ.ಮಂಜುನಾಥ ಇತರರಿದ್ದರು. 
ಬಳ್ಳಾರಿ

ನ.10 ಮುದ್ದಾಪುರದಿಂದ ಪಾದಯಾತ್ರೆ ಹಾದುಹೋಗಲಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಪಾದಯಾತ್ರೆ
  • ಬನಶಂಕರಿ ದೇವಿ
  • ಪೀತಾಂಬರ ಸೀರೆ

ನ.10 ಮುದ್ದಾಪುರದಿಂದ ಪಾದಯಾತ್ರೆ ಹಾದುಹೋಗಲಿ

ಕಂಪ್ಲಿ: ಹಂಪಿ ದೇವಾಂಗ ಸಮಾಜದ ಗಾಯತ್ರಿ ಪೀಠದಿಂದ ಬಾದಾಮಿ-ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ್ಪಿಸುವ ಪಾದಯಾತ್ರೆ ಪ್ರತಿ ವರ್ಷ ನಂ.10ಮುದ್ದಾಪುರ ಗ್ರಾಮದ ಮೂಲಕ ಹಾದು ಹೋಗಬೇಕು ಎಂದು ನಂ.10ಮುದ್ದಾಪುರ ದೇವಾಂಗ ಸಮಾಜದ ಸ್ಥಳೀಯ ಘಟಕದ ಅಧ್ಯಕ್ಷ ಕೆ.ಕೊಮಾರೆಪ್ಪ ಹೇಳಿದರು.
ನಂ.10ಮುದ್ದಾಪುರದ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಮಂಗಳವಾರ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ ಬಾದಾಮಿ ಬನಶಂಕರಿ ದೇವಿಗೆ ಅರ್ಪಿಸುವ ಪೀತಾಂಬರಿ ಸೀರೆಯೊಂದಿಗೆ ಆಗಮಿಸಿದಾಗ ಮನವಿ ಸಲ್ಲಿಸಿ ಮಾತನಾಡಿದರು.
ನಂ.10ಮುದ್ದಾಪುರ, ಕಂಪ್ಲಿಯಲ್ಲಿ ದೇವಾಂಗ ಸಮುದಾಯದವರು ಇದ್ದಾರೆ. ಐದು ವರ್ಷದ ಬಳಿಕ ಪಾದಯಾತ್ರೆ ಗ್ರಾಮಕ್ಕೆ ಆಗಮಿಸಿದೆ. ಪ್ರತಿವರ್ಷ ತಪ್ಪದೆ ನಂ.10ಮುದ್ದಾಪುರ ಗ್ರಾಮದ ಮೂಲಕ ಹಾದು ಹೋಗಲು ಶ್ರೀಗಳು ಆಸಕ್ತಿ ತೋರಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ದೇವಾಂಗಾಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲಬುರಗಿ ಸೂಳಿಭಾವಿ, ಸಂಚಾಲಕ ಗಂಗಾವತಿಯ ಪರಗಿ ನಾಗರಾಜ, ಸದಸ್ಯ ಹೊಸಪೇಟೆಯ ಅಗಳಿ ಪಂಪಾಪತಿ, ರಾಜ್ಯ ಉಪಾಧ್ಯಕ್ಷ ವಿರೂಪಾಕ್ಷ ಗೂಳಿ, ಸಮಾಜದ ಪದಾಧಿಕಾರಿಗಳಾದ ಬುದ್ಧಿ ಶ್ರೀನಿವಾಸಪ್ಪ, ಗಂಜಿ ಮಂಜುನಾಥ, ಕನಪ ಬಸವರಾಜ, ಪಿ.ಮಂಜುನಾಥ, ವಿ.ವಿಠೋಬಣ್ಣ, ಬಿ.ಪ್ರಭಾಕರ, ಇಂದ್ರಿಪಿ ಮಲ್ಲಿಕಾರ್ಜುನ, ಪಿ.ಎರ‌್ರಿಸ್ವಾಮಿ, ಕೆ.ಮಲ್ಲಿಕಾರ್ಜುನ, ಐ.ಚಿದಾನಂದ, ದಾಕ್ಷಾಯಣಮ್ಮ ಇತರರಿದ್ದರು.