ಕಂಪ್ಲಿಯಲ್ಲಿ ವಲಯ ಮಟ್ಟದ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ದೈಹಿಕ ಪರಿವೀಕ್ಷಕಿ ಎಂ.ಆರ್.ಪದ್ಮಾರೆಡ್ಡಿ ಬೆಳಗಿದರು. ಪ್ರಮುಖರಾದ ಹನುಮಂತಪ್ಪ, ಎಚ್.ದೊಡ್ಡಬಸಪ್ಪ, ಜೋಗಿ ನಾಯ್ಕ ರುದ್ರಪ್ಪ, ಸುಜಾತಾ, ಬೀರಲಿಂಗೇಶ್ವರ ಇತರರಿದ್ದರು. 
ಬಳ್ಳಾರಿ

ನಿರ್ಣಾಯಕರ ತೀರ್ಪು ನಿಷ್ಪಕ್ಷಪಾತವಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಪರಿವೀಕ್ಷಕಿ ಎಂ.ಆರ್.ಪದ್ಮಾರೆಡ್ಡಿ ಹೇಳಿಕೆ
  • ಕ್ರೀಡಾಕೂಟ

ಕಂಪ್ಲಿ: ನಿಷ್ಪಕ್ಷಪಾತ ತೀರ್ಪಿನಿಂದ ಮಾತ್ರ ಅರ್ಹ ತಂಡದ ಆಯ್ಕೆ ಸಾಧ್ಯ. ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪು ನೀಡಬೇಕು ಎಂದು ತಾಲೂಕು ದೈಹಿಕ ಪರಿವೀಕ್ಷಕಿ ಎಂ.ಆರ್.ಪದ್ಮಾರೆಡ್ಡಿ ಹೇಳಿದರು.

ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲಾವರಣದಲ್ಲಿ ಗುರುವಾರ ವಲಯಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. ಜಿಲ್ಲಾ, ರಾಜ್ಯ ಮತ್ತು ವಿಭಾಗ ಮಟ್ಟದ ಕ್ರೀಡಾಕೂಟಗಳಲ್ಲಿ ಕಂಪ್ಲಿ ತಾಲೂಕಿನ ಮಕ್ಕಳು ಸಾಧಿಸಿದ್ದು, ಮುಂದುವರೆಸಬೇಕು. ಉತ್ತಮ ತಂಡ ಆಯ್ಕೆಮಾಡಿದರೆ ಗುರಿ ಸಾಧಿಸಲು ಸಾಧ್ಯ ಎಂದರು. ದೈಹಿಕಶಿಕ್ಷಣ ಶಿಕ್ಷಕ ವೆಂಕಟರಮಣ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಉಪ ಪ್ರಾಚಾರ್ಯೆ ಸುಜಾತಾ, ಕ್ರೀಡಾ ಕಾರ್ಯದರ್ಶಿ ನಿಂಗರಾಜ ಕುಷ್ಟಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ದೊಡ್ಡಬಸಪ್ಪ, ಇಸಿಒ ಎಂ.ರೇವಣ್ಣ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬೀರಲಿಂಗೇಶ್ವರ, ಸರ್ಕಾರಿ ಅಂಗವಿಕಲ ನೌಕರರ ಸಂಘದ ತಾಲೂಕು ಅಧ್ಯಕ್ಷ ಜೋಗಿ ನಾಯ್ಕ ರುದ್ರಪ್ಪ, ಸಿಆರ್‌ಪಿಗಳಾದ ಎ.ಎಸ್.ಭೂಮೇಶ್ವರ, ಎ.ಗಂಗಾಧರ, ಪ್ರಭಾಕರ, ಕರುಣಾಕರಚಾರ್ ಇತರರಿದ್ದರು.