ಕೂಡ್ಲಿಗಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಕೆಆರ್‌ಐಡಿಎಲ್ ಎಇ ಬಿ.ಪರಶುರಾಮಗೆ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಣದ ಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಪಾಂಡುರಂಗ ನಾಯ್ಕ, ತಾಲೂಕು ಅಧ್ಯಕ್ಷ ನಲ್ಲಮುತ್ತಿ ರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಹಾಲಸ್ವಾಮಿ ಶಿವಪುರ, ಗೌರವಾಧ್ಯಕ್ಷ ನಾರಾಯಣ ನಾಯಕ, ನಗರ ಘಟಕ ಅಧ್ಯಕ್ಷ ಎಂ.ಓಬಳೇಶ್ ಇದ್ದರು. 
ಬಳ್ಳಾರಿ

ಕಾಮಗಾರಿಗೆ ಆಡಳಿತಾತ್ಮಕ ಕಾರಣ ಸ್ಪಷ್ಟಪಡಿಸಲಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ಐಡಿಎಲ್ ಎಇ ಬಿ.ಪರಶುರಾಮಗೆ ಮನವಿ

ಕೂಡ್ಲಿಗಿ: ಬಡೇಲಡಕು ಗ್ರಾಪಂ ವ್ಯಾಪ್ತಿಯ ಈಚಲಬೊಮ್ಮನಹಳ್ಳಿಯಲ್ಲಿ ನಿಯಮಾನುಸಾರ ನಡೆಯದಿರುವ ಸಿಸಿ ರಸ್ತೆ ಕಾಮಗಾರಿಯನ್ನು ತಕ್ಷಣ ತಡೆಹಿಡಿದು. ಗುಣಮಟ್ಟ ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ಕೆಆರ್‌ಐಡಿಎಲ್ ಎಇ ಬಿ.ಪರಶುರಾಮಗೆ ಮನವಿ ಸಲ್ಲಿಸಿದರು.

ಬಡೇಲಡಕು ಗ್ರಾಪಂ ವ್ಯಾಪ್ತಿಯ ಈಚಲಬೊಮ್ಮನಹಳ್ಳಿಯ ಕೊಟ್ಟೂರು ಮುಖ್ಯ ರಸ್ತೆಯಿಂದ ಬಸವಣ್ಣ ದೇವಸ್ಥಾನದವರೆಗೆ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿಗದಿತ ತಾಂತ್ರಿಕ ಮಾನದಂಡ ಹಾಗೂ ಗುಣಮಟ್ಟ ಪಾಲಿಸಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಗುಣಮಟ್ಟ ಹಾಗೂ ಪಾರದರ್ಶಕವಾಗಿ ನಡೆಯಬೇಕು.
ನೆಲ ಸಮತಟ್ಟು, ಅರ್ಥ್‌ವರ್ಕ್, ಬೇಸ್ ಸೇರಿ ಪೂರ್ವಸಿದ್ಧತಾ ಕಾಮಗಾರಿ ಕೈಗೊಳ್ಳದೆ ಕಾಂಕ್ರೀಟ್ ಹಾಕಲಾಗುತ್ತಿದೆ. ರಸ್ತೆ ಗುಣಮಟ್ಟದ ದೃಷ್ಟಿಯಿಂದ ಇದು ಗಂಭೀರ ವಿಷಯವಾಗಿದೆ. ಹಳೇ ಸಿಸಿ ರಸ್ತೆ ಮೇಲೆ ಹೊಸ ಕಾಮಗಾರಿ ಕೈಗೊಂಡಿರುವುದಕ್ಕೆ ತಾಂತ್ರಿಕ, ಆಡಳಿತಾತ್ಮಕ ಕಾರಣ ಸ್ಪಷ್ಟಪಡಿಸಬೇಕು. ಕಾಮಗಾರಿಯಲ್ಲಿ ಲೋಪ ಅಥವಾ ಅಕ್ರಮ ಕಂಡರೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಣದ ಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಪಾಂಡುರಂಗ ನಾಯ್ಕ, ತಾಲೂಕು ಅಧ್ಯಕ್ಷ ನಲ್ಲಮುತ್ತಿ ರಮೇಶ್, ಪ್ರಧಾನ ಕಾರ್ಯದರ್ಶಿ ಟಿ.ಹಾಲಸ್ವಾಮಿ ಶಿವಪುರ, ಗೌರವಾಧ್ಯಕ್ಷ ನಾರಾಯಣ ನಾಯಕ, ನಗರ ಘಟಕ ಅಧ್ಯಕ್ಷ ಎಂ.ಓಬಳೇಶ್, ಕಾರ್ಯಧ್ಯಕ್ಷ ಕೆ.ಶಿವರಾಜ್, ಪ್ರಮುಖರಾದ ಬಿ.ನವೀನ್ ಕುಮಾರ್, ವೀರಭದ್ರಪ್ಪ, ಕುಪ್ಪಿನಕೇರಿ ವೀರೇಶ್, ಕೃಷ್ಣಪ್ಪ, ಕೈವಲ್ಲಾಪುರ ದುರುಗಪ್ಪ, ರಾಮಪ್ಪ ಇದ್ದರು.