ಹೂವಿನಹಡಗಲಿಯಲ್ಲಿ ಭಾರತೀಯ ಕಿಸಾನ್ ಸಭಾದಿಂದ ಜೆಸ್ಕಾಂ ಕಚೇರಿ ಎಇಇ ಕೇದಾರನಾಥಗೆ ಮನವಿ ಸಲ್ಲಿಸಲಾಯಿತು. ರಾಜ್ಯಖಜಾಂಚಿ ಶಾಂತರಾಜಜೈನ್, ಎಐಕೆಎಸ್ ರಾಜ್ಯ ಸಂಚಾಲಕ ಹಲಗಿ ಸುರೇಶ, ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಮುಕುಂದಗೌಡ, ಸದಸ್ಯ ಕೆ.ನಾಗರಾಜ, ಸಿಪಿಐ ತಾಲೂಕು ಕಾರ್ಯದರ್ಶಿ ಜಂಗ್ಲಿಸಾಬ್, ರೈತರಾದ ಶಿವಕುಮಾರ ಕೊಂಪಿ, ಬಸವರಾಜ, ಕೊಟ್ರೇಶ ಇತರರಿದ್ದರು.
ಹೂವಿನಹಡಗಲಿ: ವಿದ್ಯುತ್ ಸಂಪರ್ಕ ಅಕ್ರಮ-ಸಕ್ರಮ ಯೋಜನೆಯ ಕ್ರಿಯಾ ಯೋಜನೆ ಅವೈಜ್ಞಾನಿಕವಾಗಿದ್ದು, ಅದನ್ನು ವೈಜ್ಞಾನಿಕವಾಗಿ ರಚಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಭಾದಿಂದ ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಎಇಇ ಕೇದಾರನಾಥಗೆ ಶನಿವಾರ ಮನವಿ ಸಲ್ಲಿಸಲಾಯಿತು.
ರಾಜ್ಯಖಜಾಂಚಿ ಶಾಂತರಾಜ್‌ಜೈನ್ ಮಾತನಾಡಿ, 2016-17ನೇ ಸಾಲಿನಿಂದ ಅಕ್ರಮ-ಸಕ್ರಮ ವಿದ್ಯುತ್ ಸಂಪರ್ಕ ಯೋಜನೆಯಡಿ, ಅರ್ಜಿಗಳ ಆಧಾರದ ಮೇಲೆ ಈಗ ಕಾಮಗಾರಿ ಅನುಷ್ಠಾನಗೊಳ್ಳುತ್ತಿದೆ.
ಆದರೆ, ಅನುಷ್ಠಾನಗೊಳ್ಳುತ್ತಿರುವ ಕ್ರಿಯಾ ಯೋಜನೆ ಅವೈಜ್ಞಾನಿಕವಾಗಿದ್ದು, ಕಾಮಗಾರಿಯನ್ನು ಸಂಪೂರ್ಣವಾಗಿ ವೈಜ್ಞಾನಿಕ ವಿಧಾನದಲ್ಲಿ ಪುನರ್ ಪರಿಶೀಲಿಸಿ ಅನುಷ್ಠಾನಗೊಳಿಸಬೇಕು.
ವಿದ್ಯುತ್ ಲೈನ್ ಬಲವರ್ಧನೆ ಮತ್ತು ಲೋಡ್ ಸಮತೋಲನಕ್ಕೆ ಸ್ಪಷ್ಟ ಯೋಜನೆ ರೂಪಿಸಬೇಕಾಗಿದ್ದು, ಭವಿಷ್ಯದಲ್ಲಿ ರೈತರಿಗೆ ಲೋಡ್ ಶೆಡ್ಡಿಂಗ್ ಸಮಸ್ಯೆ ಎದುರಾಗದಂತೆ, ದೀರ್ಘಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ರೈತರಿಗೆ ಅಗತ್ಯ ಸೌಕರ್ಯಗಳನ್ನು ಸಮರ್ಪಕ ವಾಗಿ ವಿತರಿಸಬೇಕು ಎಂದು ಒತ್ತಾಯಿಸಿದರು.