ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಉದ್ಘಾಟನೆ ಸಂದರ್ಭ ಜನಸೇವಾ ಟ್ರಸ್ಟ್ ಅಧ್ಯಕ್ಷ ಬುಡ್ಡಿ ಬಸವರಾಜ, ಗ್ರಾಪಂ ಸದಸ್ಯ ಎನ್.ನಾಗರಾಜ್, ಪ್ರಮುಖರಾದ ಪೂಜಾರಿ ನಿಂಗಣ್ಣ, ಸಿ.ಶಿವಾನಂದ್, ಉಮಾಪತಿ ಶೆಟ್ಟರ್, ರಾಜವಲಿ ಗಡ್ಡದ್, ಅಶೋಕ ಉಪ್ಪಾರ್ ಇದ್ದರು. 
ಬಳ್ಳಾರಿ

ವಿದ್ಯಾರ್ಥಿಗಳು ಸಮಾಜಮುಖಿ ಕೆಲಸದಲ್ಲಿ ತೊಡಗಲಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಜನಸೇವಾ ಟ್ರಸ್ಟ್ ಅಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿಕೆ
  • ಪ್ರತಿಭಾ ಪುರಸ್ಕಾರ
ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿದ್ಯಾರ್ಥಿಗಳು ಸಮಾಜಮುಖಿ ಕೆಲಸದಲ್ಲಿ ತೊಡಗಬೇಕು ಎಂದು ಜನಸೇವಾ ಟ್ರಸ್ಟ್ ಅಧ್ಯಕ್ಷ ಬುಡ್ಡಿ ಬಸವರಾಜ್ ಹೇಳಿದರು.
ಹಂಪಾಪಟ್ಟಣದಲ್ಲಿ ಜನಸೇವಾ ಟ್ರಸ್ಟ್ ಹಾಗೂ ನವೋದಯ ಯುವಕ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೋಟ್‌ಬುಕ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪತ್ರಿ ಗೀತಮ್ಮ, ಉಪಾಧ್ಯಕ್ಷ ಟಿ.ಮಂಜುನಾಥ್, ಸದಸ್ಯರಾದ ಬಿ.ನಾಗರಾಜ್, ಸಿ.ಎಲ್.ಕುಮಾರ್, ಸು.ಸಿ.ಗಾಳೆಪ್ಪ, ಪಿ.ಗಣೇಶ್, ಮಂಜುಳಾ, ನವೋದಯ ಯುವಕ ಸಂಘದ ಅಧ್ಯಕ್ಷ ಯು.ಹನುಮಂತ, ಮಾಲ್ಕಿ ಕೃಷ್ಣಪ್ಪ, ಎಸ್ಡಿಎಂಸಿ ಅಧ್ಯಕ್ಷ ಬಂಟರ ಮಂಜುನಾಥ ಇತರರಿದ್ದರು.