ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳು ಸ್ವಚ್ಛತೆಯ ಅರಿವು ಮೂಡಿಸಿದರು. ಸಂಸ್ಥೆ ಖಜಾಂಚಿ ಶಿವಾಜಿ ರಾವ್, ಶಿಕ್ಷಕರಾದ ಗೋಣಿ ಬಸಪ್ಪ, ಎಚ್.ಹನುಮೆಶ, ಉಮೇಶ, ಇಂದಿರಾ, ವಸಂತ ಪೋಷಕರಾದ ಮಾಬುನ್ನಿ, ಲಕ್ಷ್ಮೀ, ಹುಲಿಗೆಮ್ಮ, ಪಾರ್ವತಿ, ಕಸ ವಿಲೇವಾರಿ ಘಟಕದ ಸಿಬ್ಬಂದಿ ನಾಗಮ್ಮ ಇತರರಿದ್ದರು. 
ಬಳ್ಳಾರಿ

ಪರಿಸರ ಸ್ವಚ್ಛತೆ ಆದ್ಯತೆಗೆ ಆದ್ಯತೆ ನೀಡಲಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ
  • ಶಾಲೆ
  • ಆವರಣ
ಸಿರಿಗೇರಿ: ನಿನಗಾಗಿ ನಾವು ಸಂಸ್ಥೆ ಗ್ರಾಮ ಘಟಕದ ಪದಾಧಿಕಾರಿಗಳು ಮತ್ತು ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಬ್ಬಂದಿ ಶನಿವಾರ ಸಸಿಗಳಿಗೆ ನೀರು ಹಾಕಿ, ಶಾಲಾ ಆವರಣವನ್ನು ಕಸವನ್ನು ಸ್ವಚ್ಛಗೊಳಿಸಿದರು.
ಸಂಸ್ಥೆ ಗೌರವ ಅಧ್ಯಕ್ಷ ವಿ.ಹನುಮೇಶ ಮಾತನಾಡಿ, ಕಸವನ್ನು ಕಸದ ಬುಟ್ಟಿಯಲ್ಲಿಯೇ ಹಾಕಿ ಪರಿಸರ ಸ್ವಚ್ಛತೆ ಆದ್ಯತೆ ನೀಡಬೇಕು. ಗ್ರಾಪಂ ಕಸ ವಿಲೇವಾರಿ ವಾಹನವನ್ನು ಪ್ರತಿ ವಾರ್ಡ್‌ಗೆ ಹೋಗಿ ಸಂಗ್ರಹಿಸಬೇಕು ಎಂದರು.
ಮುಖ್ಯಶಿಕ್ಷಕ ಯೋಗೀಶ್ ಜಾಲಿ ಮಾತನಾಡಿ, ಗ್ರಾಮದಲ್ಲಿ ನಿಮಗಾಗಿ ನಾವು ಸಂಸ್ಥೆ ಒಳ್ಳೆಯ ಕೆಲಸ ಮಾಡುತ್ತಿದೆ. ಎಲ್ಲ ಸರ್ಕಾರಿ ಶಾಲೆ ಆವರಣವನ್ನು ಸ್ವಚ್ಛವಾಗಿಡಲು ಆದ್ಯತೆ ನೀಡಬೇಕು ಎಂದರು.