ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಲಿ
ಬಳ್ಳಾರಿ : ನಗರದಲ್ಲಿ ಇತ್ತೀಚಿಗೆ ರಸಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಪ್ರಕರಣ ಬಹಿರಂಗಗೊಂಡಿದೆ. ಅದು ಯಾರು ಮಾಡಿದರೂ ತಪ್ಪು. ಯಾರ ಕುಮ್ಮಕ್ಕಿಲ್ಲದೆ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ. ಅಕ್ರಮವಾಗಿ ಸಂಗ್ರಹಿಸಿಟ್ಟಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿ ಎಂದು ಶಾಸಕ ನಾರಾಭರತರೆಡ್ಡಿ ಹೇಳಿದರು.
ನಗರದ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಳ್ಳಾರಿ ನಗರದಲ್ಲಿ ಜಿಲ್ಲಾ ಉತ್ಸವ ಇಲ್ಲದಿದ್ದರೂ, ಬರುವ ಒಂದೆರೆಡು ತಿಂಗಳಲ್ಲಿ ವಾಲ್ಮಿಕಿ ಪುತ್ಥಳಿ, ಬಸವೇಶ್ವರ ಪುತ್ಥಳಿ ಅನಾವರಣ, ಸಾಹಿತ್ಯ ಸಮ್ಮೆಳನ ಅನೇಕ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ಅವಕಾಶ ಸಿಗಲಿದೆ. ವಾಲ್ಮಿಕಿ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್‌ನಲ್ಲಿ ಅನುಮತಿ ಪಡೆಯಲಿದೆ. ಬಳ್ಳಾರಿ ನಗರದ ಬೆಟ್ಟಕ್ಕೆ ರೋಪ್ ವೇ ನಿರ್ಮಾಣವನ್ನು ಪಿಪಿಟಿ ಮಾಡೆಲ್‌ನಲ್ಲಿ ಮಾಡಲು ನಿರ್ಧರಿಸಿತ್ತು. ಆದರೆ, ಅವರು ಫಿಜಿಬಲ್ ಇಲ್ಲ ಎಂದು ಹೇಳಿದ್ದು, ಅವರನ್ನು ಮನವೊಲಿಸುತ್ತಿದೆ. ಬೇಸಿಗೆ ವೇಳೆ ನಗರಕ್ಕೆ ಕುಡಿವ ನೀರಿನ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳಲಿದ್ದು, ಜಲಾಶಯದಿಂದ ಎಪ್ರಿಲ್ ಇಲ್ಲವೇ ಮೇನಲ್ಲಿ ಕಾಲುವೆಗಳಿಗೆ ನೀರು ಬಿಡಿಸಿ ಕೆರೆಗಳನ್ನು ತುಂಬಿಸಿಕೊಳ್ಳಲಿದೆ. ಬಿಸಿಲಿನ ಜಳ ತಡೆಯುವಂತೆ ಗ್ರಿನ್ ಬರುವ ಬೇಸಿಗೆಯಲ್ಲಿ ಸರ್ಕಲ್‌ಗಳಲ್ಲಿ ನಿಲ್ಲುವ ವಾಹನಗಳ ಸವಾರರಿಗೆ ಮ್ಯಾಟನ್ನು ಅಳವಡಿಸಲಾಗುವುದು. ಸಿಎಂ ಕುರ್ಚಿ ಕದನದ ಬಗ್ಗೆ ಮಾತ ನಾಡುವಷ್ಟು ದೊಡ್ಡವ ನಾನಲ್ಲ. ನಾನು ಯುವ ಶಾಸಕ, ಅಭಿವೃದ್ಧಿ ಅಷ್ಟೆ ನನ್ನ ಗುರಿ ಎಂದರು.
ಕೇಂದ್ರ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎನ್‌ಎಂಡಿಸಿಯಿಂದ ಅಕ್ರಮ ಅದಿರು ಸಾಗಾಣಿಕೆ ಬಗ್ಗೆ ಬಿಜೆಪಿಯ ಯಾರು ಧ್ವನಿ ಎತ್ತುತ್ತಿಲ್ಲ. ಅದೇ ರಾಜ್ಯ ಸರ್ಕಾರದ ಅಧಿನದಲ್ಲಿರುವ ಸಂಸ್ಥೆ ಮಾಡಿದ್ದರೆ ಈಗಾಗಲೇ ರಂಪಾಟ ಮಾಡಲಾಗುತ್ತಿತ್ತು ಎಂದು ಕಿಡಿಕಾರಿದರು. ಕೆಎಂಇಆರ್‌ಸಿಯಲ್ಲಿ ದೊಡ್ಡ ಮಟ್ಟದಲ್ಲಿ ಜಿಲ್ಲೆಗೆ ಅನುದಾನ ಒದಗಿ ಬರುವ ಹಿನ್ನೆಲೆ ಬಜೆಟ್‌ನಲ್ಲಿ ಜಿಲ್ಲೆಗೆ ಅಷ್ಟೊಂದು ಹಣ ಬೇಕಿಲ್ಲ ಎಂದರು.