ಕೊಟ್ಟೂರಿನಲ್ಲಿ ಪ್ರಜಾಸೌಧ ಕಾಮಗಾರಿಯನ್ನು ಶಾಸಕ ಕೆ.ನೇಮಿರಾಜ್ ನಾಯ್ಕ ಪರಿಶೀಲಿಸಿದರು. ತಹಸೀಲ್ದಾರ್ ಅಮರೇಶ ಜಿ.ಕೆ.,ಪಪಂ ಮುಖ್ಯಾಧಿಕಾರಿ ನಸರುಲ್ಲಾ, ತಾಪಂ ಎಡಿ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಶಿವಾನಂದ ಬಾವಿಕಟ್ಟಿ ಇತರರಿದ್ದರು. 
ಬಳ್ಳಾರಿ

ಗುತ್ತಿಗೆದಾರರಿಗೆ ಡಿಮಾಂಡ್ ಮಾಡಿದರೆ ಕಾನೂನು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ನೇಮಿರಾಜ್ ನಾಯ್ಕ ಎಚ್ಚರಿಕೆ
  • ಕೊಟ್ಟೂರಿನಲ್ಲಿ ಪ್ರಜಾಸೌಧ ಕಾಮಗಾರಿ ಪರಿಶೀಲನೆ
ಕೊಟ್ಟೂರು: ಪಟ್ಟಣದಲ್ಲಿ ಪ್ರಜಾಸೌಧ ಕಾಮಗಾರಿ ಗುಣಮಟ್ಟದಿಂದ ನಡೆದಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಪ್ರಜಾಸೌಧ ಕಾಮಗಾರಿ ಪರಿಶೀಲಿಸಿದ ನಂತ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲವರು ಪ್ರಜಾಸೌಧ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಕಾಮಗಾರಿ ಸ್ಥಳಕ್ಕೆ ಬರುವ ಅಧಿಕಾರ ಅವರಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಕಾಮಗಾರಿ ನಡೆಯುವ ಸ್ಥಳಕ್ಕೆ ಪದೇ ಪದೆ ಆಗಮಿಸಿ ಸಂಘಟನೆಗಳ ಹೆಸರು ಹೇಳಿ ತೊಂದರೆ ಕೊಡುವುದು ಹಾಗೂ ಗುತ್ತಿಗೆದಾರರಿಗೆ ಬೆದರಿಕೆ ಹಾಕಿ ಡಿಮಾಂಡ್ ಮಾಡುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಪ್ರಜಾಸೌಧ ನಿರ್ಮಾಣಕ್ಕೆ ಹರಸಾಹಸ ಪಟ್ಟು ಅನುದಾನ ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಭಂಗ ತರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗೆ ತಿಳಿಸಿದರು.
ತಹಸೀಲ್ದಾರ್ ಅಮರೇಶ ಜಿ.ಕೆ., ಪಪಂ ಮುಖ್ಯಾಧಿಕಾರಿ ನಸರುಲ್ಲಾ, ತಾಪಂ ಎಡಿ ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್, ಪಪಂ ಸದಸ್ಯ ಶಿವಾನಂದ ಬಾವಿಕಟ್ಟಿ, ಪಪಂ ಮಾಜಿ ಸದಸ್ಯ ಡಿಶ್ ಮಂಜುನಾಥ್, ವರ್ತಕ ತಿಮ್ಮಲಾಪುರ ಕೊಟ್ರೇಶ, ಕರ್ನಾಟಕ ಗೃಹ ಮಂಡಳಿ ಇಂಜಿನಿಯರ್ ಹರ್ಷ ಮತ್ತಿತರರು ಇದ್ದರು.