ಗೋನಾಳ್ ಸಹಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಕಲಿಕಾ ಹಬ್ಬದಲ್ಲಿ ಸಿಆರ್‌ಪಿ ಎ.ಎಸ್.ಭೂಮೇಶ್ವರ ಮಾತನಾಡಿದರು. ಪ್ರಮುಖರಾದ ಸರ್ದಾರಸ್ವಾಮಿ, ರವಿಕುಮಾರ್, ಮಲ್ಲಯ್ಯ, ಉಷಾರಾಣಿ, ವೀರೇಶ ಇತರರಿದ್ದರು.
- ಸಿಆರ್‌ಪಿ ಎ.ಎಸ್.ಭೂಮೇಶ್ವರ ಅಭಿಮತ
- ಕಂಪ್ಲಿ ಗೋನಾಳ್ ಕಲಿಕಾಹಬ್ಬ
ಕಂಪ್ಲಿ: ಗೋನಾಳ್ ಗ್ರಾಮದ ಸಹಿಪ್ರಾ ಶಾಲಾವರಣದಲ್ಲಿ ಗುರುವಾರ ಆಯೋಜಿಸಿದ್ದ ಮೆಟ್ರಿ ಮತ್ತು ಸುಗ್ಗೇನಹಳ್ಳಿ ಕ್ಲಸ್ಟರ್‌ಗಳ ಎಫ್‌ಎಲ್‌ಎನ್ ಆಧಾರಿತ ಮಕ್ಕಳ ಕಲಿಕಾ ಹಬ್ಬದಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಿಆರ್‌ಪಿ ಎ.ಎಸ್.ಭೂಮೇಶ್ವರ ಮಾತನಾಡಿ, ಅಂಕ ಗಳಿಕೆಗಾಗಿ ಮಾತ್ರ ಶಾಲೆಗೆ ಬರಬೇಕು ಎನ್ನುವ ವಿದ್ಯಾರ್ಥಿಗಳ ಮನೋಭಾವನೆಯನ್ನು ಬದಲಿಸಿ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಬಳಸಿಕೊಂಡು ಕೌಶಲ ಗಳಿಸಬೇಕು ಎನ್ನುವ ಭಾವನೆ ಬೆಳೆಸಲು ಕಲಿಕಾಹಬ್ಬ ಸಹಕಾರಿಯಾಗಿದೆ ಎಂದರು.
ಕಲಿಕಾಹಬ್ಬದಲ್ಲಿ ಎರಡು ಕ್ಲಸ್ಟರ್‌ಗಳ 19 ಶಾಲೆಗಳ 200ಕ್ಕೂ ಹೆಚ್ಚು ಮಕ್ಕಳು ಏಳು ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಗೋನಾಳ್ ಎಸ್ಡಿಎಂಸಿ ಅಧ್ಯಕ್ಷ ಸರ್ದಾರ್ ಸ್ವಾಮಿ ಚಾಲನೆ ನೀಡಿದರು. ಮುಖ್ಯಶಿಕ್ಷಕರಾದ ರವಿಕುಮಾರ್ ಗೋನಾಳ್, ಎಚ್.ಪಿ.ಸೋಮಶೇಖರ ದೇವಲಾಪುರ, ಮಲ್ಲಯ್ಯ ಸೋಮಲಾಪುರ, ವೀರೇಶ ಜೀರಿಗನೂರು, ಉಷಾರಾಣಿ ಚಿನ್ನಾಪುರ, ಮಲ್ಲಿಕಾರ್ಜುನ ಉಪ್ಪಾರಹಳ್ಳಿ, ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಇದ್ದರು.