ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕೈದಿಗಳಿಗೆ ಮನಪರಿವರ್ತನಾ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ಕಾರಾಗೃಹ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕಾರಾಗೃಹ ಅಧೀಕ್ಷಕಿ ಆರ್.ಲತಾ, ಸಂಡೂರಿನ ಜೀವನ್ ಸಂಗೀತ್ ಸಂಸ್ಥೆಯ ಸಂಸ್ಥಾಪಕಿ ಗೀತಾ ವೀರೇಶ್ ಇತರರಿದ್ದರು.
ಸಮಯ ಹಾಳು ಮಾಡದೆ ಕಸುಬು ಕಲಿಯಿರಿ
ಬಳ್ಳಾರಿ: ಕೈದಿಗಳು ಜಗಳ ಆಡುವುದರಲ್ಲೇ ಸಮಯ ಹಾಳು ಮಾಡುವುದನ್ನು ಬಿಟ್ಟು ಕಸುಬುಗಳನ್ನು ಕಲಿಯಬೇಕು. ಧ್ಯಾನ, ಯೋಗ ಮಾಡಬೇಕು. ಇದಕ್ಕೆ ನಾವು ನಿರಂತರ ಸಹಕಾರ ನೀಡುವುದಾಗಿ ಕೇಂದ್ರ ಕಾರಾಗೃಹ ಅಧೀಕ್ಷಕಿ ಆರ್.ಲತಾ ಹೇಳಿದರು.
ನಗರದ ಕೇಂದ್ರ ಕಾರಾಗೃಹದಲ್ಲಿ ಸಂಡೂರಿನ ಜೀವನ್ ಸಂಗೀತ್ ಸಂಸ್ಥೆಯಿಂದ ಮಹಿಳಾ ಕೈದಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಮನಪರಿವರ್ತನಾ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರು ಯಾವುದರಲ್ಲೂ ಕಮ್ಮಿ ಇಲ್ಲ ಎಂದರು. ಸಂಸ್ಥೆ ಸಂಸ್ಥಾಪಕಿ ಗೀತಾ ವೀರೇಶ್ ಮಾತನಾಡಿ, ಅಪರಾಧವನ್ನು ಯಾರೂ ಇಷ್ಟಪಟ್ಟು ಮಾಡುವುದಿಲ್ಲ. ಇದು ನಿಮಗೆ ಬದಲಾಗಲು ಸಿಕ್ಕಿರುವ ಸಮಯ.
ಬದಲಾಗಿ ಹೊರಬಂದು ಸಹಜ ಜೀವನ ನಡೆಸಲು ಹಾಗೂ ಸ್ವಾವಲಂಬಿಯಾಗಲು ಮೊಂಬತ್ತಿ, ಅಗರಬತ್ತಿ ತಯಾರಿಕೆ ಸೇರಿ ವಿವಿಧ ತರಬೇತಿ ನೀಡುತ್ತೇವೆ ಎಂದು ತಿಳಿಸಿದರು. ಕೈದಿಗಳಿಗೆ ಕ್ರೀಡೆ ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು.