ಡಿ.ರಿಯಾಜ್  
ಬಳ್ಳಾರಿ

ಪಡಿತರ ವಿತರಣೆಯಲ್ಲಿ ಸೋರಿಕೆ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಮಷಿನ್ ಬಿಲ್
  • ನೀಡದೆ
  • ವಂಚನೆ
ಕೊಟ್ಟೂರು: ತಾಲೂಕಿನಲ್ಲಿ 24 ಪಡಿತರ ಅಂಗಡಿಗಳಿದ್ದು ಕೆಲ ಅಂಗಡಿ ಮಾಲೀಕರು ತೂಕದಲ್ಲಿ ವ್ಯತ್ಯಾಸ ಮಾಡಿ ಗ್ರಾಹಕರ ಪ್ರತಿ ಪಡಿತರ ಕಾರ್ಡ್‌ಗೆ 2-3ಕೆಜಿ ತೂಕ ಕಡಿಮೆ ಕೊಡುತ್ತಿರುವ ವಿಷಯ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಸೋರಿಕೆ ತಡೆಯಲು ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಪಡಿತರ ಸಿಗುವುದನ್ನು ಖಚಿತಪಡಿಸಲು ಬಿಲ್ ಮಷಿನ್ ಬಳಕೆ ಕಡ್ಡಾಯ ಮಾಡಿದೆ.
ತಾಲೂಕಿನ 24 ಪಡಿತರ ಅಂಗಡಿಗಳಲ್ಲಿ 3 ಅಂಗಡಿಗಳಲ್ಲಿ ಮಾತ್ರ ಬಿಲ್ಲಿಂಗ್ ಮಿಷನ್ ಇದ್ದು ಉಳಿದ ಅಂಗಡಿ ಮಾಲೀಕರು ಬಿಲ್ ಮಿಷಿನ್ ಅಳವಡಿಸಿಕೊಂಡಿಲ್ಲ.
ಬಿಲ್ ಇಲ್ಲದ ಕಾರಣ ಕೆಲ ಅಂಗಡಿ ಮಾಲಿಕರು ರಾಗಿ ಬದಲಾಗಿ ಅಕ್ಕಿ ಕೊಡುವುದು ಕಂಡುಬರುತ್ತಿದೆ ಇನ್ನೂ ಕೆಲ ಮಾಲೀಕರು ಕೊಟ್ಟ ಪದಾರ್ಥಗಳನ್ನೇ ತೆಗೆದುಕೊಂಡು ಹೋಗುತ್ತಿರು ದುಸ್ಥಿತಿ ನಿರ್ಮಾಣವಾಗಿದೆ.
ಪಡಿತರ ಧಾನ್ಯಗಳ ತೂಕದಲ್ಲಿನ ವ್ಯತ್ಯಾಸದ ಬಗ್ಗೆ ಫಲಾನುಭವಿಗಳು ಪ್ರಶ್ನೆ ಮಾಡಿದರೆ ಅಂತಹವರ ಪಡಿತರ ಕಾರ್ಡ್ ರದ್ದುಗೊಳಿಸುವುದಾಗಿ ಅಂಗಡಿ ಮಾಲೀಕರು ಬೆದರಿಕೆ ಹಾಕುವ ಆರೋಪಗಳು ಕೇಳಿಬಂದಿವೆ. ಪಡಿತರ ಫಲಾನುಭವಿಗಳಿಂದ ಒಂದು ರೂಪಾಯಿ ಹಣ ಪಡೆಯುವಂತಿಲ್ಲ ಎಂಬ ಆಹಾರ ಇಲಾಖೆ ನಿಯಮ ಇದ್ದರು ಕೆಲ ಅಂಗಡಿ ಮಾಲಿಕರು ರಾಜಾ ರೋಷವಾಗಿ ಪ್ರತಿ ಕಾರ್ಡ್‌ಗೆ 10 ರಿಂದ 20 ರೂ.ಪಡೆದು ಆಹಾರ ಇಲಾಖೆ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ.
ತಾಲೂಕಿನಲ್ಲಿನ ಪಡಿತರ ಫಲಾನುಭವಿಗಳಿಗೆ ಆಗುತ್ತಿರುವ ಅನ್ಯಾಯ ತಡೆಯಲು ಎಲ್ಲ ಪಡಿತರ ಅಂಗಡಿಗಳಲ್ಲಿ ಶೀಘ್ರ ಬಿಲ್ ಮಷಿನ್ ಅಳವಡಿಸಿಕೊಳ್ಳಲು ಆಹಾರ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕಾಗಿದೆ.
"

ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಸೋರಿಕೆ ತಡೆಯಲು ಆಹಾರ ಇಲಾಖೆಯು ಪ್ರತಿ ಪಡಿತರ ಅಂಗಡಿ ಮಾಲೀಕರು ಕಡ್ಡಾಯವಾಗಿ ಬಿಲ್ ಮಷಿನ್ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಕರಿತು ಅಂಗಡಿ ಮಾಲಿಕರಿಗೆ ಈಗಾಗಲೆ ನೋಟಿಸ್ ನೀಡಿ ಎಚ್ಚರಿಸಲಾಗಿದೆ. ತಕ್ಷಣ ಮಷಿನ್ ಅಳವಡಿಸಿಕೊಳ್ಳಬೇಕು. ನಿರ್ಲಕ್ಷ್ಯಿಸಿದವರ ವಿರುದ್ಧ ಸೂಕ್ತ ಕ್ರಮ ವಹಿಸಲಾಗುವುದು.

— ಡಿ.ರಿಯಾಜ್ ಉಪನಿರ್ದೇಶಕ ಆಹಾರ ಇಲಾಖೆ ವಿಜಯನಗರ