ಒಡಿಶಾದಲ್ಲಿ ಆದಿವಾಸಿಗಳ ಭೂಕಬಳಿಕೆ ವಿರೋಧಿಸಿ ಎಮ್ಮಿಗನೂರಿನಲ್ಲಿ ಎಐಕೆಕೆಎಂಎಸ್‌ನಿಂದ ಪ್ರತಿಭಟನೆ ನಡೆಸಲಾಯಿತು. 
ಬಳ್ಳಾರಿ

ಆದಿವಾಸಿಗಳ ಭೂಕಬಳಿಕೆ ಸಲ್ಲ

ಕಂಪ್ಲಿ: ಒಡಿಶಾದಲ್ಲಿ ಆದಿವಾಸಿಗಳ ಭೂಕಬಳಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಸಂಘಟನೆಯ ಪ್ರಮುಖರ ಬಂಧನ ಖಂಡಿಸಿ ಎಮ್ಮಿಗನೂರು ಗ್ರಾಮದಲ್ಲಿ ಅಖಿಲ ಭಾರತ ರೈತ, ಕೃಷಿ, ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಎಐಕೆಕೆಎಂಎಸ್ ಅಖಿಲ ಭಾರತ ಅಧ್ಯಕ್ಷ ಸತ್ಯವಾನ್, ಒಡಿಶಾ ರಾಜ್ಯಾಧ್ಯಕ್ಷ ಸದಾಶಿವದಾಸ್ ಹಾಗೂ ಇತರರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ. ಈ ಘಟನೆ ರೈತ ವಿರೋಧಿ ನಡೆಯಾಗಿದೆ. ಇದು ಸರ್ವಾಧಿಕಾರಿ ಧೋರಣೆಯಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಆದಿವಾಸಿಗಳ ಭೂಮಿ ಕಬಳಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.