ಕೂಡ್ಲಿಗಿಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಅವರ ಜನ ಸಂಪರ್ಕ ಕಚೇರಿ ಮುಂದೆ ವಾಲ್ಮೀಕಿ ಸಮುದಾಯದ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಾರೆಪ್ಪ ನಾಯಕ ಮಗದಂಪೂರ, ಕಾವಲಿ ಶಿವಪ್ಪ ನಾಯಕ, ಶ್ರವಣಕುಮಾರ ಡಿ. ನಾಯಕ ಇತರರಿದ್ದರು. 
ಬಳ್ಳಾರಿ

5 ಲಕ್ಷ ನಕಲಿ ಪ್ರಮಾಣಪತ್ರ ವಿತರಣೆ

ಶಾಮಸುಂದರ್ ಕೊಪ್ಪಳಕರ್
ಕೂಡ್ಲಿಗಿ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುವುದು ಹಾಗೂ ವಿತರಣೆಯನ್ನು ತಡೆಗಟ್ಟಲು ಒತ್ತಾಯಿಸಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಅವರ ಜನ ಸಂಪರ್ಕ ಕಚೇರಿ ಮುಂದೆ ವಾಲ್ಮೀಕಿ ಸಮುದಾಯದ ಸದಸ್ಯರು ಭಾನುವಾರ ಧರಣಿ ನಡೆಸಿದರು.
ಮುಖಂಡ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿ, ಈ ಅನ್ಯಾಯದ ಕುರಿತು ಶಾಸಕ ಎನ್.ಟಿ. ಶ್ರೀನಿವಾಸ ಅವರು ಈಗಾಗಲೇ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ. ಆದರೆ ಅವರಿಗೆ ಮಾತನಾಡಲು ಹೆಚ್ಚಿನ ಸಮಯಾವಕಾಶ ಸಿಕ್ಕಿಲ್ಲ. ಮುಂದಿನ ಅಧಿವೇಶನದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಮಾತನಾಡಿ, ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ನಕಲಿ ಪ್ರಮಾಣ ಪತ್ರ ಪಡೆದಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರವು ಈ ಹೋರಾಟವನ್ನು ಗಂಭೀರ ಪರಿಗಣಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಬೇಕು. ಇದರಿಂದ ಅನಾಹುತಕ್ಕೆ ನಡೆದರೆ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ನಕಲಿ ಜಾತಿ ಪತ್ರಗಳ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ಮುಖಂಡರಾದ ಪ್ರಶಾಂತ ಕುಮಾರ್ ಕೆ.ಟಿ., ದೊಡ್ಡಯ್ಯ ನಾಯಕ ಹಳಿಗೇರಾ, ಮಲ್ಲಿಕಾರ್ಜುನ ಬಟಗಿ, ಮಾರೆಪ್ಪ ನಾಯಕ ಸೇಡಂ, ಸಿ.ಬಿ. ಜಯರಾಂ ನಾಯಕ, ಅಜೇಯ, ಕೆಕೆ ಹಟ್ಟಿ ಹನುಮಂತಪ್ಪ, ಕರಿಬಸಮ್ಮ, ಕಾಟೇರ್ ಹಾಲೇಶ್, ಮಾಜಿ ಸೈನಿಕ ಕಾಟೇರ್ ರಮೇಶ್, ಜಯಮ್ಮರ ರಾಘವೇಂದ್ರ, ಬಾಣದ ಮೂರ್ತಿ, ಗುನ್ನಳ್ಳಿ ನಾರಾಯಣ, ಸಿ.ಬಿ. ಗುರು, ವೆಂಕಟೇಶ್, ಪ್ರದೀಪ್, ಐಬಿ ಸುರೇಶ್, ಮಂಜುನಾಥ ಉಪಸ್ಥಿತರಿದ್ದರು.