ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ ವಿವೇಕ ಮಂಟಪ - ಉಪನ್ಯಾಸ ಮಾಲಿಕೆ ಕಾರ್ಯಕ್ರಮ ನಡೆಯಿತು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಜರ‌್ರ ಗುರುಮೂರ್ತಿ, ರಾಮಧೂತ ಕಂಪ್ಯೂಟರ್ ಮಳಿಗೆ ಮಾಲೀಕ ಕೆ.ಎಸ್.ಬಾಬು ಇದ್ದರು. =====
ಬಳ್ಳಾರಿ : ಪ್ರಜ್ಞೆಯ ಕೊರತೆಯೇ ಮನುಷ್ಯನ ಎಲ್ಲ ಸಮಸ್ಯೆಗಳ ಮೂಲಕಾರಣ. ಸಮಾಜದಲ್ಲಿ ಪ್ರಜ್ಞಾವಂತಿಕೆ ಹಾಗೂ ಜಾಗೃತಿ ಮೂಡಿಸಲು ಗೌತಮಬುದ್ಧ , ವಿವೇಕಾನಂದರಾದಿಯಾಗಿ ಎಲ್ಲ ಮಹಾತ್ಮರು ಶ್ರಮಿಸಿದರು ಎಂದು ಗದಗ-ವಿಜಯಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪಾಂಚಜನ್ಯ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ವಿವೇಕ ಮಂಟಪ - ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಧಾರ್ಮಿಕತೆ ಹೆಸರಿನಲ್ಲಿ ನಡೆದಿರುವ ಮೌಢ್ಯತೆ ವಿರುದ್ಧ ಸಮರವನ್ನೆ ಸಾರಿದರು. ವೈಜ್ಞಾನಿಕತೆ ಹಾಗೂ ಪ್ರಜ್ಞಾವಂತಿಕೆ ಬೆಳೆಸಿಕೊಂಡು ಶಿಸ್ತಿನ ಹಾಗೂ ವ್ಯವಸ್ಥಿತ ಜೀವನ ನಡೆಸಲು ಜನರಿಗೆ ಕರೆ ನೀಡಿದರು ಎಂಬುದಾಗಿ ನುಡಿದರು.
ಜಗತ್ತಿನ ಎಲ್ಲ ಮಹಾತ್ಮರು, ಜನರು ತಮ್ಮ ಬೋಧನೆಗಳನ್ನು ಕೇಳಿ ತಮ್ಮನ್ನು ಹೂವು ಹಣ್ಣು ನೀಡಿ ಪೂಜಿಸುವುದನ್ನು ಇಷ್ಟಪಡುವುದಿಲ್ಲ. ತಾವು ಹೇಳಿದ ಮಾರ್ಗ ಅನುಸರಿಸಿದಾಗ ಮಾತ್ರ ಅವರು ಸಂತೋಷಗೊಳ್ಳುತ್ತಾರೆ ಎಂದು ತಿಳಿಸಿದರು.