ಕಂಪ್ಲಿಯಲ್ಲಿ ತಾಲೂಕು ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಪದಾಧಿಕಾರಿಗಳು ಮೆರವಣಿಗೆ ನಡೆಸಿದರು. ಪದಾಧಿಕಾರಿಗಳಾದ ಜಗದೀಶಗೌಡ, ಜಿ.ಎಚ್.ಶಶಿಧರ, ಎಸ್.ಶ್ರೀನಿವಾಸರೆಡ್ಡಿ, ಇಲಿಯಾಜ್ ಇತರರಿದ್ದರು.
- ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಒತ್ತಾಯ
- ಕಂಪ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ
ಕಂಪ್ಲಿ: ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್‌ಗೆ ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ತಾಲೂಕು ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಜಗದೀಶ ಗೌಡ ಒತ್ತಾಯಿಸಿದರು.
ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಧ್ಯಕ್ಷತೆವಹಿಸಿ ಮಾತನಾಡಿ, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್‌ಗೆ ಕಾರ್ಮಿಕ ಇಲಾಖೆಯ ಎಲ್ಲ ಯೋಜನೆಗಳೊಂದಿಗೆ ಆರೋಗ್ಯ ವಿಮೆ, ವಸತಿ ಸೌಲಭ್ಯ ನೀಡಬೇಕು. ಪಟ್ಟಣದಲ್ಲಿ ಛಾಯಾ ಭವನ ನಿರ್ಮಿಸಿಕೊಡುವಲ್ಲಿ ಶಾಸಕರು, ಪುರಸಭೆ ಆಡಳಿತ ಮುಂದಾಗಬೇಕು ಎಂದರು.
ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಎಪಿಎಂಸಿತನಕ ಮೆರವಣಿಗೆ ನಡೆಸಿದರು. ಕಂಪಿಲರಾಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಹಣ್ಣು, ಹಾಲು, ಬ್ರೆಡ್ ವಿತರಿಸಿದರು. ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡಲಾಯಿತು. ಸಂಘದ ಪದಾಧಿಕಾರಿಗಳಾದ ಜಿ.ಎಚ್.ಶಶಿಧರ, ಎಸ್.ಶ್ರೀನಿವಾಸರೆಡ್ಡಿ, ಇಲಿಯಾಜ್, ಎಂ.ಶಿವಕುಮಾರ್, ಎಮ್ಮಿಗನೂರು ಬಸವರಾಜ, ಎಚ್.ಎಸ್.ವೀರೇಶ, ದೇವಸಮುದ್ರ ತಿಪ್ಪೇಸ್ವಾಮಿ, ವೀರನಗೌಡ, ಪ್ರಮೋದ್‌ಕುಮಾರ್ ಸೇರಿದಂತೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಪಾಲ್ಗೊಂಡಿದ್ದರು.