ಎಂ.ಬಿ. ಅಯ್ಯನಹಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಡಾ. ರವೀಂದ್ರನಾಥ ಉದ್ಘಾಟಿಸಿದರು. ಡಾ.ಕೆ.ಎಂ. ವೀರೇಶ್, ಸಾಹಿತಿಗಳಾದ ಎನ್.ಎಂ. ರವಿಕುಮಾರ್, ಬಿ.ಎಂ. ಪ್ರಭುದೇವ, ಇಂದುಮತಿ ಸೇರಿದಂತೆ ಹಲವರು ಇದ್ದರು.
ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕಿನ ಪಂಡಿತ ಪರಂಪರೆಯು ಕನ್ನಡ ಸಾಹಿತ್ಯಕ್ಕೆ ಮೌಲ್ಯಯುತ ಕೃತಿ ಸಂಪತ್ತನ್ನು ನೀಡಿದೆ. ಈ ವಿದ್ವತ್ತಿನ ಪರಂಪರೆಯು ಹೊಸ ಚಿಂತನೆಗಳಿಗೆ ದಾರಿಯಾಗುವಂತಹ ಅಪಾರ ಕೊಡುಗೆ ನೀಡುವ ಮೂಲಕ ಅಖಂಡ ಜಿಲ್ಲೆಯಲ್ಲೇ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಾ.ಕೆ.ರವೀಂದ್ರನಾಥ ತಿಳಿಸಿದರು.
ಎಂ.ಬಿ. ಅಯ್ಯನಹಳ್ಳಿಯ ಸಾ.ಮ. ಸಂಗಮೇಶ್ವರಯ್ಯ ನಿವಾಸದ ಆವರಣದಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯಿಂದ ಭಾನುವಾರ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಸಾಹಿತ್ಯಿಕ ಪರಂಪರೆಯಲ್ಲಿ ಹಿರಿಯ ಸಾಹಿತಿಗಳಾದ ಹಿ.ಮ. ನಾಗಯ್ಯ, ಬಿ.ಎಂ. ಗುರುಸಿದ್ದಯ್ಯ, ಸೊ.ಮ. ಚಂದ್ರಶೇಖರಯ್ಯ, ಎಸ್.ಎಂ. ವೃಷಭೇಂದ್ರಸ್ವಾಮಿ, ಹಿ.ಮ. ಮರಳುಸಿದ್ಧಯ್ಯ, ರುದ್ರಮುನಿ ಅಯ್ಯ ಸೇರಿದಂತೆ ಪ್ರಮುಖರು ಮಹತ್ವದ ಕೊಡುಗೆ ನೀಡಿದ್ದಾರೆ. ಹಿಂದೆ ಕಾನಮಡುಗು ಶರಣಾರ್ಯರ ಪ್ರಭಾವದಿಂದ ನಡೆದ ವಿದ್ಯಾ ದಾಸೋಹದ ಫಲವಾಗಿ ಈ ವಿದ್ವತ್ ಪರಂಪರೆ ಬೆಳೆಯಲು ಸಾಧ್ಯವಾಯಿತು ಎಂದರು.
ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ.ಕೆ.ಎಂ. ವೀರೇಶ್ ಮಾತನಾಡಿ, ಇಂದಿನ ಯುವಜನತೆಗೆ ಶರಣರ ತತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು. ಸಾಹಿತಿ ಬಿ.ಎಂ. ರಾಜಶೇಖರ ಅವರು ಉಪನ್ಯಾಸ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್, ಶಸಾಪ ತಾಲೂಕು ಅಧ್ಯಕ್ಷ ಎಸ್.ಎಂ. ಸಂಗಮೇಶ್ವರಯ್ಯ, ಥಿಯೋಸಾಫಿಕಲ್ ವ್ಯವಸ್ಥಾಪಕ ಜೆ.ಎಂ. ಧನಂಜಯ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಇಂದುಮತಿ ತಿಪ್ಪೇಸ್ವಾಮಿ, ಬಳ್ಳಾರಿ ಜಿಲ್ಲಾಧ್ಯಕ್ಷೆ ನೀಲಾಂಬಿಕಾ, ಕೊಟ್ಟೂರು ಶಸಾಪ ಅಧ್ಯಕ್ಷ ದೇವರಮನಿ ಕರಿಯಪ್ಪ, ಬಿ.ಎಂ. ಪ್ರಭುದೇವ್, ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್, ರತ್ನಮ್ಮ, ನಾಗರತ್ನಮ್ಮ, ಗೌರಮ್ಮ, ಕಸಾಪ ಹೋಬಳಿ ಅಧ್ಯಕ್ಷ ಎನ್.ಎಸ್. ತಿಪ್ಪೇಸ್ವಾಮಿ, ಜಿ. ಈಶ್ವರಗೌಡ, ಶಿಕ್ಷಕ ಹಾರಕಬಾವಿ ಬಸವರಾಜ ಉಪಸ್ಥಿತರಿದ್ದರು.