ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ 
ಬಳ್ಳಾರಿ

ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅನಾಹುತ
ಬಳ್ಳಾರಿ : ಇಲ್ಲಿನ ಗವಿಯಪ್ಪ ವೃತ್ತದಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ ಆದ ಪರಿಣಾಮ ಆಟೋ ಹಾಗೂ ಅಂಗಡಿಗಳಿಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ನಡೆದಿದೆ.
ಮಸ್ಕಿಯಿಂದ ನಗರಕ್ಕೆ ಆಗಮಿಸಿದ್ದ ಕೆಎಸ್‌ಆರ್‌ಟಿಸಿ ಬಸ್ ಗವಿಯಪ್ಪ ವೃತ್ತದಲ್ಲಿ ಪ್ರಯಾಣಿಕರನ್ನು ಇಳಿಸಿ, ಹೊಸ ಬಸ್ ನಿಲ್ದಾಣದ ಕಡೆ ತೆರಳುವ ವೇಳೆ ಬಾರಿ ಅನಾಹುತ ತಪ್ಪಿದೆ. ನಿಯಂತ್ರಣ ತಪ್ಪಿದ ಬಸ್ ವೃತ್ತದ ಬದಿಯ ರಸ್ತೆಯಲ್ಲಿದ್ದ ಆಟೋಗೆ ಡಿಕ್ಕಿ ಹೊಡೆದು, ನಂತರ ಪಕ್ಕದಲ್ಲಿದ್ದ ಹಣ್ಣಿನ ಬಂಡಿ ಹಾಗೂ ಟೀ ಅಂಗಡಿಯ ನಾಮಫಲಕ ಬೋರ್ಡ್‌ಗೆ ನುಗ್ಗಿದೆ. ಬಸ್ ವೇಗವಾಗಿ ನಾಮಫಲಕ ಬೋರ್ಡ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಬಸ್ಸಿನ ವೇಗ ತಗ್ಗಿ ಕೂಡಲೇ ಸ್ಥಗಿತಗೊಂಡಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ನಾಮಫಲಕ ಬೋರ್ಡ್ ಕೆಳಗಿದ್ದ ವ್ಯಾಪಾರಸ್ಥರ ಬಂಡಿಗಳು ಜಖಂಗೊಂಡಿವೆ. ಬಸ್ಸಿನ ಮುಂಭಾಗದ ಗ್ಲಾಸ್ ಹಾಗೂ ವಿದ್ಯುತ್ ದೀಪಗಳು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಈ ಅಪಘಾತದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾಫಿಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.