ಕೊಟ್ಟೂರಿನಲ್ಲಿ ಶ್ರೀ ಕೊಟ್ಟೂರೇಶ್ವರ ಜಾತ್ರೆ ನಿಮಿತ್ತ ಸ್ವಾಮಿಯ ರಥದ ಗಡ್ಡೆಯನ್ನು ಶುಕ್ರವಾರ ಭಕ್ತರು ಬಯಲು ಪ್ರದೇಶಕ್ಕೆ ಎಳೆದು ತಂದರು.
ಕೊಟ್ಟೂರು: ಪಟ್ಟಣದ ಆರಾಧ್ಯ ದೇವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಫೆ.12ರಂದು ಜರುಗಲಿದ್ದು, ಈ ಪ್ರಯುಕ್ತ ಶುಕ್ರವಾರ ತೇರುಗಡ್ಡೆಯಿಂದ ಹೊರ ತೆಗದು ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಯಿತು.
ತೇರು ಗಡ್ಡೆಯನ್ನು ಸ್ವಾಮಿಯ ಕ್ರಿಯಾಮೂರ್ತಿಗಳ ಸಮ್ಮುಖದಲ್ಲಿ ಧರ್ಮಕರ್ತರು, ಕಟ್ಟೆಮನಿ ದೈವದವರು, ಆಯಗಾರ ಬಳಗದವರ ನೇತೃತ್ವದಲ್ಲಿ ಭಕ್ತರು ಸಕಲ ಮಂಗಲವಾದ್ಯ ಮೇಳಗಳೊಂದಿಗೆ ತೇರು ಮನೆಯಿಂದ ಬಯಲು ಪ್ರದೇಶಕ್ಕೆ ತೇರು ಗಡ್ಡೆಯನ್ನು ತಂದು ನಿಲ್ಲಿಸಿದರು. ಕಳೆದ ವಷರ್ದಂತೆ ಈ ಬಾರಿ ಅವಘಡ ಉಂಟಾಗದಿರಲೆಂದು ಮುಂಜಾಗ್ರತೆಯಾಗಿ ತಜ್ಞ ಇಂಜಿನಿಯರ್‌ಗಳಿಂದ ರಥದ ಚಕ್ರಗಳು, ಸ್ಟೇರಿಂಗ್ ಹಾಗೂ ಬ್ಯಾಟರಿ, ಬ್ರೇಕ್ ಪರಿಶೀಲನೆಗೆ ಒಳಪಡಿಸಲಾಯಿತು.
ಶಿವಪ್ರಕಾಶ ಕ್ರಿಯಾಮೂರ್ತಿಗಳು ಮಹಲ್ ಮಠ, ಧರ್ಮಕರ್ತ ಕೆ.ಎಂ.ಶೇಖರಪ್ಪ ಹಾಗೂ ಅರ್ಚಕರಾದ ನಾಗರಾಜ,ಅಜ್ಯಯ್ಯ ಇತರರಿದ್ದರು. ಪಿಎಸ್‌ಐ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.