ಗುಡೇಕೋಟೆ ಸಮೀಪದ ಅಪ್ಪೇನಹಳ್ಳಿ ತಾಂಡಾದ ಹತ್ತಿರದ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಕೋಟೆಗುಡ್ಡದ ಮಾರಮ್ಮದೇವಿಯ 2ನೇ ವಾರದ ಜಾತ್ರೆಗೆ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದರು.  
ಬಳ್ಳಾರಿ

ಕೋಟೆಗುಡ್ಡ ಮಾರಮ್ಮ ಜಾತ್ರೆ ಅದ್ದೂರಿ

ಪ್ರಮುಖ ಮುಖ್ಯಾಂಶಗಳು

  • ಜಾತ್ರೋತ್ಸವ
  • ಕೋಟೆಗುಡ್ಡ ಮಾರಮ್ಮ

ಕೋಟೆಗುಡ್ಡ ಮಾರಮ್ಮ ಜಾತ್ರೆ ಅದ್ದೂರಿ

ಕಾನಹೊಸಹಳ್ಳಿ: ಶ್ರೀ ಕೋಟೆಗುಡ್ಡ ಮಾರಮ್ಮನ 2ನೇ ವಾರದ ಜಾತ್ರೋತ್ಸವ ಮಂಗಳವಾರ ನೂರಾರು ಭಕ್ತರ ನಡುವೆ ಸಂಭ್ರಮದಿಂದ ಜರುಗಿತು.
ಬೆಟ್ಟದ ಬಯಲು ಪ್ರದೇಶದಲ್ಲಿ ನಾಲ್ಕು ಮಂಗಳವಾರದಂದು ಜಾತ್ರೆ ನಡೆಯುತ್ತದೆ. ಪ್ರತಿವರ್ಷ ಎಳ್ಳಮಾವಾಸ್ಯೆ ಬಳಿಕ ಮೊದಲ ಮಂಗಳವಾರ ಜಾತ್ರೆ ಆರಂಭವಾಗುತ್ತದೆ. ದೇವಸ್ಥಾನದ ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟ ನಂತರ ಪ್ರಸ್ತುತ 3ನೇ ವರ್ಷ ಜಾತ್ರೆ ನಡೆಸಲಾಗುತ್ತಿದೆ.
ಈ ಸ್ಥಳ ಕರಡಿ ಧಾಮದ ವ್ಯಾಪ್ತಿಯ ಬೆಟ್ಟ ಗುಡ್ಡಗಳಿಂದ ಕೂಡಿದೆ. ಸಂಜೆ ಕರಡಿಗಳ ಉಪಟಳವಿರುತ್ತದೆ. ಆದ್ದರಿಂದ ಭಕ್ತರು ಬೆಟ್ಟದಿಂದ ಕೆಳಗೆ ಬರುವವರೆಗೂ ಅಧಿಕಾರಿಗಳು ಜಾಗ್ರತೆ ವಹಿಸುತ್ತಾರೆ.
ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮತ್ತು ಗುಡೇಕೋಟೆ ಕಂದಾಯ ಇಲಾಖೆಯ ಮುರಳಿಕೃಷ್ಣ, ಪಿಡಿಒ ಹನುಮಂತಪ್ಪ ಹಾಗೂ ಇತರ ಅಧಿಕಾರಿಗಳ ತಂಡ ಗ್ರಾಮದಲ್ಲಿ ಬೀಡುಬಿಟ್ಟು ಜಾಗ್ರತೆ ವಹಿಸಿತ್ತು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಮಂಗಳವಾರ ಎಎಸ್ಪಿ ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದರು. ಸಿಪಿಐ ಪ್ರಲ್ಹಾದ್ ಚನ್ನಗಿರಿ, ಪಿಎಸೈ ಸುಬ್ರಹ್ಮಣ್ಯ ಇದ್ದರು.