ಸಿರಿಗೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. 
ಬಳ್ಳಾರಿ

ಮೌಲ್ಯಗಳ ಪ್ರತೀಕ ಕೋರೆಗಾಂವ್ ವಿಜಯೋತ್ಸವ

ಸಿರಿಗೇರಿ: ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ತಾರತಮ್ಯ, ಅಸ್ಪಶ್ಯತೆ ವಿರುದ್ಧ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಸಂಕೇತವಾಗಿ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದು ರಾಜ್ಯ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಸಂಚಾಲಕ ಎಚ್.ತಿಪ್ಪೇಸ್ವಾಮಿ ಹೇಳಿದರು.
ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. 30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವ ದಿನ ಎಂದು ಆಚರಿಸಲಾಗುತ್ತಿದೆ ಎಂದರು.
ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಸಂಘಟನಾ ಸಂಚಾಲಕ ಎಚ್ ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ರಾಮಲಿಂಗ, ಡಾ ಬಿ. ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಎಚ್., ಉಪಾಧ್ಯಕ್ಷರಾದ ರಾಮಣ್ಣ ಎ.ಕೆ., ಗೋಪಾಲ್, ಹುಲ್ಲೇಶ್,ಪದಾಧಿಕಾರಿಗಳಾದ ಜಲಾಲಿ, ರವಿ, ಶೇಖರ್, ರಾಮಯ್ಯ ದೇವರಾಜ್, ರಾಜಶೇಖರ್, ಪವನ್, ಪ್ರಮುಖರಾದ ಮಾರೆಪ್ಪ, ಪರಶುರಾಮ್, ಯಂಕಪ್ಪ, ದೊಡ್ಡ ಈರಪ್ಪ, ಕಾಡಪ್ಪ, ನಾಗರಾಜ್ ಇತರರಿದ್ದರು.