ಸಿರಿಗೇರಿ ಸಮೀಪದ ಕೊಂಚಿಗೇರಿ ಗ್ರಾಮದ ಬಳಿ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಸೇತುವೆ ದುಸ್ಥಿತಿಯಲ್ಲಿರುವುದು.
ಸಿರಿಗೇರಿ: ಕೊಂಚಿಗೇರಿ ಗ್ರಾಮದ ಬಳಿ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಸೇತುವೆ 72 ವರ್ಷ ಹಳೆಯದಾಗಿದ್ದು, ದುರಸ್ತಿ ಇಲ್ಲವೇ ಹೊಸ ಸೇತುವೆ ನಿರ್ಮಾಣದ ಅಗತ್ಯವಿದೆ.
1953 ರಲ್ಲಿ ಸೇತುವೆ ನಿರ್ಮಿಸಲಾಗಿದ್ದು, ಇಲ್ಲಿಯ ತನಕ ದುರಸ್ತಿ ಕೈಗೊಂಡಿಲ್ಲ. ಸೇತುವೆ ಮೇಲಿನ ರಸ್ತೆಯೂ ದುಸ್ಥಿತಿಯಲ್ಲಿದೆ. ಸೇತುವೆ ಒಂದು ಕಡೆ ಶಿಥಿಲಗೊಂಡು ವಾಲಿರುವುದರಿಂದ ಸಾರ್ವಜನಿಕರು ಪ್ರಾಣಭಯದಲ್ಲೇ ಸಂಚರಿಸಬೇಕಾಗಿದೆ. ಕಿತ್ತಿಹೋಗಿ ಅಪಾಯಕ್ಕೆ ಎಡೆ ಮಾಡುತ್ತಿದೆ. ಸೇತುವೆ ಮೇಲೆ ನಿತ್ಯ ಹಲವಾರು ವಾಹನಗಳು ಕೂಡ ಸಂಚರಿಸುವುದರಿಂದ ಸ್ವಲ್ಪ ನಿರ್ಲಕ್ಷೃ ತೋರಿದರೂ ಅಪಾಯ ಖಚಿತ ಎನ್ನುವ ವಾತಾವರಣ ಇದೆ. ಇದರಿಂದಾಗಿ ಸೇತುವೆ ದುರಸ್ತಿಗೆ ತ್ವರಿತವಾಗಿ ಕ್ರಮ ವಹಿಸಬೇಕಾಗಿದೆ.