ಸಂಡೂರು ತಾಲೂಕು ಸುಶೀಲಾನಗರ ಗ್ರಾಪಂ ಸಭಾಂಗಣದಲ್ಲಿ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಪಿಡಿಒಗಾಗಿ ಕಾದು ಕುಳಿತಿದ್ದ ರಾಮಗಢ ಗ್ರಾಮಸ್ಥರು. 
ಬಳ್ಳಾರಿ

ಪಟ್ಟಾ ಜಮೀನಿಗೆ ಖರಾಬು ನಮೂದು ಸಲ್ಲ

ಸಂಡೂರು: ರಾಮಘಡ ಗ್ರಾಮದ 4.18ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಅನೂಸೂಚಿತ ಬುಡಕಟ್ಟು ಜನ ವಾಸವಿರುವ ಕುರಿತು ಸುಶೀಲಾನಗರ ಗ್ರಾಪಂನಲ್ಲಿ ಮಂಗಳವಾರ ಕರೆಯಲಾಗಿದ್ದ ಅರಣ್ಯ ಹಕ್ಕು ಸಮಿತಿ ಸಭೆ, ಪಿಡಿಒ ಗೈರಿನಿಂದಾಗಿ ಮುಂದೂಡಲಾಯಿತು.
ಗ್ರಾಮದ ನಿವಾಸಿ ಈಶ್ವರನಾಯ್ಕ ಮಾತನಾಡಿ, ಗ್ರಾಪಂ ಸದಸ್ಯರು ಹಾಗೂ ಸಾರ್ವಜನಿಕರಿಗೆ ಸಭೆಗೆ ಆಹ್ವಾನಿಸಿ ಪಿಡಿಒ ಸ್ವತಃ ಬಂದಿಲ್ಲ. ಎರಡನೇ ಬಾರಿ ಈ ರೀತಿಯಾ ಮಾಡಿದ್ದು, ಪಿಡಿಒ ಪ್ರಭುವನಗೌಡರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಗ್ರಾಮದ ಷಣ್ಮುಖಪ್ಪ, ಸಿದ್ದಾಪುರ ಉಮೇಶಗೌಡ, ನಾಗರಾಜ, ಆಂಬರೀಷ ನಾಯ್ಕ, ಯಂಕಾನಾಯ್ಕ ಮಾತನಾಡಿ, ಸಿದ್ದಾಪುರದ 120, ಸುಶೀಲಾನಗರದ 45 ರೈತರು ಸೇರಿದಂತೆ ಐದು ಹಳ್ಳಿಗಳ 200ಕ್ಕೂ ಹೆಚ್ಚು ಜನರ ಪಹಣಿಗಳಲ್ಲಿ ಖರಾಬು ಜಮೀನು ಎಂದು ನಮೂದಿಸಲಾಗಿದೆ. ಆದರೆ, ಈ ರೈತರ ಬಳಿ ಪಟ್ಟಾ ಹಾಗೂ ಪಹಣಿಗಳಿದ್ದು, ಬ್ಯಾಂಕ್ ಸಾಲ, ಟ್ರಾಕ್ಟರ್ ಸಾಲ ಪಡೆಯಲಾಗಿದೆ ನಮ್ಮ ಜಲ, ನಮ್ಮ ಭೂಮಿಯನ್ನು ಬೇರೆಯವರಿಗೆ ಕೊಡಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು. ಗ್ರಾಪಂ ಕಾರ್ಯದರ್ಶಿ ಹುಲುಗಪ್ಪ ಇದ್ದರು.