ಕಂಪ್ಲಿಯಲ್ಲಿ ಹಜರತ್ ಸೈಯದ್ ಷಾಹ್ ಖಾಜಾಪೀರ್ ಮಹ್ಮದ್ ಷಾ ಹುಸೇನಿ ಉರುಫ್ ಖಾಜಾಮೀನ್ ಸಾಹೇಬರ 312ನೇ ಗಂಧ ಕಾರ್ಯಕ್ರಮ ನಡೆಯಿತು. 
ಬಳ್ಳಾರಿ

ಖಾಜಾಮೀನ್ ಸಾಹೇಬರ ಗಂಧ ಸಂಪನ್ನ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣದ 2ನೇವಾರ್ಡ್‌ನಲ್ಲಿ ಹಜರತ್ ಸೈಯದ್ ಷಾಹ್ ಖಾಜಾಪೀರ್ ಮಹ್ಮದ್ ಷಾ ಹುಸೇನಿ ಉರುಫ್ ಖಾಜಾಮೀನ್ ಸಾಹೇಬ್ ಅವರ 312ನೇ ಗಂಧ ಕಾರ್ಯಕ್ರಮ ಭಾನುವಾರ ನಡೆಯಿತು.
ಉರುಸ್ ನಿಮಿತ್ತ ದರ್ಗಾವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸೋಮವಾರ ಉರುಸ್, ಮಂಗಳವಾರ ಜಿಯಾರಾತ್ ಸೇರಿದಂತೆ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ನಡೆಯಲಿವೆ. ಪೀರ್ ಮಹ್ಮದ್ ಷಾ ಹುಸೇನ್ ಕಮಿಟಿ ಅಧ್ಯಕ್ಷ ಎಂ.ಹುಸೇನ್ ಬಾಷ, ಖಾಜಾಮೀನ್ ಸಾಹೇಬರ ವಂಶಸ್ಥರು ಇತರರಿದ್ದರು.