ಕಂಪ್ಲಿ ತುಳಜಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಮುಖರಾದ ಡಾ.ಬಿ.ಎಸ್.ಸುಧಾಕರ್, ತನುಜಾ ಸುಧಾಕರ್, ಎಚ್.ಪಿ.ಶಿಕಾರಿ ರಾಮು, ಪಿ.ಮೂಕಯ್ಯಸ್ವಾಮಿ, ಬಿ.ಸಿದ್ದಪ್ಪ ಇತರರಿದ್ದರು.
- ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಬಣ್ಣನೆ
- ಕಂಪ್ಲಿ ತುಳಜಾಭವಾನಿಗೆ ವಿಶೇಷ ಪೂಜೆ
ಕಂಪ್ಲಿ: ಆದಿವಾಸಿ ಬುಡಕಟ್ಟು ಹಕ್ಕಿಪಿಕ್ಕಿ (ಹರಿಣಿ ಶಿಕಾರಿ) ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಆರಕ್ಷಕ ನಿರೀಕ್ಷಕ ಡಾ.ಬಿ.ಎಸ್.ಸುಧಾಕರ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಹೇಳಿದರು.
ಪಟ್ಟಣದ ಹಕ್ಕಿಪಿಕ್ಕಿ ಕಾಲನಿಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಂತಿಹೋಮ, ಉಡಿ ತುಂಬುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
2001ರಿಂದ 2003ರ ತನಕ ಕಂಪ್ಲಿ ಪಿಎಸ್‌ಐ ಆಗಿದ್ದ ಸುಧಾಕರ್ ಹಕ್ಕಿಪಿಕ್ಕಿ ಸಮುದಾಯದವರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ, ಎಸ್ಟಿ ಪ್ರಮಾಣಪತ್ರ ಕೊಡಿಸುವಲ್ಲಿ, ದುಶ್ಚಟ ಮತ್ತು ಅಪರಾಧಗಳಿಂದ ದೂರವಾಗುವಂತೆ ಪ್ರೇರೇಪಿಸಲು ಶ್ರೀ ತುಳಜಾಭವಾನಿ ಗುಡಿ ಕಟ್ಟಿಸಿ ಜಾಗೃತಿ ಮೂಡಿಸಿದರು ಎಂದರು.
ಸಿಸಿಬಿ ಪಿಐ ಡಾ.ಬಿ.ಎಸ್.ಸುಧಾಕರ್ ಮಾತನಾಡಿ, ಹಕ್ಕಿಪಿಕ್ಕಿ ಸಮುದಾಯದವರು ಶಿಕ್ಷಣದಿಂದ ವಂಚಿತರಾಗಿ ಅಪರಾಧಗಳಲ್ಲಿ ತೊಡಗಿಕೊಂಡಿದ್ದನ್ನು ಬಿಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಲಾಯಿತು. ಇದೀಗ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟು ಬದಲಾವಣೆ ಹೊಂದಿದ್ದಾರೆ ಎಂದರು.
ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ತನುಜಾ ಸುಧಾಕರ್, ತೇಜಸ್ವಿನಿ ಅವಿನಾಶ್, ಎಚ್.ಪಿ.ಶಿಕಾರಿ ರಾಮು, ಜೆ.ಶಿಕಾರಿ ಬಾಬು, ಹರಿಕೃಷ್ಣ, ಜಾನಕಿ, ಎಚ್.ಪಿ.ಶ್ರೀಕಾಂತ, ಗೋಪಿ, ಈರಣ್ಣ, ಕೆ.ಶ್ರೀನಿವಾಸರಾವ್, ಜಿ.ಜಿ.ಚಂದ್ರಣ್ಣ, ಬಿ.ಸಿದ್ದಪ್ಪ, ಬಿ.ನಾರಾಯಣಪ್ಪ, ಅಯ್ಯೋದಿ ವೆಂಕಟೇಶ, ಕೆ.ಷಣ್ಮುಖ, ಬಿ.ನಾಗೇಂದ್ರ, ಶಿವರಾಮ, ಮಾಧವರೆಡ್ಡಿ ಇತರರಿದ್ದರು.