ಕೂಡ್ಲಿಗಿಯ ಹಿರೇಮಠ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ, ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್, ಪ್ರಾಚಾರ್ಯ ಸಿದ್ದರಾಮ ಹಿರೇಮಠ, ಕನಿಪ ತಾಲೂಕು ಅಧ್ಯಕ್ಷ ರಾಘವೇಂದ್ರ ಸಾಲುಮನಿ, ಪ್ರಗತಿಪರ ರೈತ ಎಲ್.ಆರ್.ತಿಪ್ಪೇಸ್ವಾಮಿ ಇದ್ದರು. 
ಬಳ್ಳಾರಿ

ಸಾಹಿತ್ಯಕ್ಕೆ ಶ್ರೀಮಂತ ಭಾಷೆ ಕನ್ನಡ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಪ್ರಶಾಂತ ಸಾಗರ ಶಿವಾಚಾರ್ಯರು ಅನಿಸಿಕೆ
  • ದತ್ತಿ ಉಪನ್ಯಾಸ

ಕೂಡ್ಲಿಗಿ: ಹೆತ್ತ ತಾಯಿ, ಹೊತ್ತ ನೆಲ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದವು ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಹೇಳಿದರು.

ಹಿರೇಮಠ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕದಿಂದ ಮಂಗಳವಾರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದಿ ಕವಿ ಪಂಪ, ರನ್ನರ ಆದಿಯಾಗಿ, ಮಹಾಭಾರತ ಕಾವ್ಯಗಳು ರಚಿತವಾಗಿವೆ. ಸಾಹಿತ್ಯಕ್ಕೆ ಶ್ರೀಮಂತ ಭಾಷೆ ಕನ್ನಡ. ಕಾವ್ಯ, ಸಂಗೀತ, ರಂಗಭೂಮಿ ಮತ್ತು ಜನಪದ ಕಲೆಗಳು ಕನ್ನಡಿಗರ ಭಾವನೆಗಳನ್ನು ಗಟ್ಟಿಗೊಳಿಸಿವೆ. ಕನ್ನಡದ ನೆಲ, ಜಲ, ಭಾಷೆ, ವೈವಿಧ್ಯ ಮತ್ತು ಸಂಸ್ಕೃತಿಯ ಮಹತ್ವ ತಿಳಿಸಬೇಕು ಎಂದರು. ಆ.26ರಂದು ಶಿವಮೊಗ್ಗದಲ್ಲಿ ನಡೆಯುವ ಗಜಲ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಾಚಾರ್ಯ ಸಿದ್ಧರಾಮ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಕಾಟೇರ ಹಾಲೇಶ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಾಲುಮನಿ ರಾಘವೇಂದ್ರ,ನಿವೃತ್ತ ಮುಖ್ಯಶಿಕ್ಷಕರಾದ ಕೆ.ನಾಗನಗೌಡ, ಕೆ.ಎಚ್.ಎಂ.ವೀರಭದ್ರಯ್ಯ, ಕಸಾಪ ತಾಲೂಕು ಅಧ್ಯಕ್ಷ ವೀರೇಶ ಅಂಗಡಿ, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ಪ್ರಮುಖರಾದ ಜಿ.ಶ್ರೀಧರ, ನಂದಿ ಬಸವರಾಜ, ರಂಗಾ ರಾಘವೇಂದ್ರ ಶೆಟ್ಟಿ, ಅಗಸಗಟ್ಟೆ ತಿಂದಪ್ಪ, ಮಂಜುನಾಥ ಇದ್ದರು.