ಇಟಗಿಯಲ್ಲಿ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ನಡೆಯಿತು. ಶಾಸಕ ಜೆ.ಎನ್.ಗಣೇಶ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಕುರುಬರ ಜಕ್ಕಪ್ಪ, ವೀರೇಶ್, ಗೌಡ್ರು ಡಿಂಡಿ ಮಹರ್ಷಿ, ಬಳ್ಳಾಪುರ ಲಿಂಗಪ್ಪ ಇತರರಿದ್ದರು. 
ಬಳ್ಳಾರಿ

ಸಮಾನತೆಗೆ ಕನಕದಾಸರ ಕೊಡುಗೆ ಅಪಾರ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಎನ್.ಗಣೇಶ್ ಅನಿಸಿಕೆ
  • ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ

ಕಂಪ್ಲಿ: ಸಮಾಜದಲ್ಲಿ ಸಮಾನತೆ ಮೂಡಿಸುವಲ್ಲಿ ಕನಕದಾಸರ ಕೊಡುಗೆ ಮಹತ್ವದ್ದಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಟಗಿಯಲ್ಲಿ ಭಕ್ತ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿ ಶನಿವಾರ ಮಾತನಾಡಿ, ಕನಕದಾಸರು, ಸಂಗೊಳ್ಳಿ ರಾಯಣ್ಣ ಅವರ ತತ್ವಾದರ್ಶಗಳನ್ನು ಮಕ್ಕಳಿಗೆ ತಿಳಿಸಬೇಕು. ಇಟಗಿ ರೈತರಿಗಾಗಿ 44 ಕೋಟಿ ರೂ. ಏತ ನೀರಾವರಿಗಾಗಿ ಪ್ರಸ್ತಾವನೆ ಸಲ್ಲಿಸಿದೆ.
ಎಲ್‌ಎಲ್ ಕಾಲುವೆಗೆ ಕರ್ನಾಟಕ ಆಂದ್ರ ಕೋಟದ ಜಂಟಿ ನೀರು ಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಲಾಗಿದೆ ಎಂದರು. ನಂತರ ಭಕ್ತ ಕನಕದಾಸ, ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಉಪನ್ಯಾಸಕ ಡಿ.ಎಸ್.ರಾಜಕುಮಾರ್, ದೇವಲಾಪುರದ ಗುರುಪಾದಯ್ಯಸ್ವಾಮಿ, ಪ್ರಮುಖರಾದ ಕುರುಬರ ಜಕ್ಕಪ್ಪ, ವೀರೇಶ್, ಕಡೆಮನಿ ಮಾರೆಪ್ಪ, ಪೂಜಾರಿ ರಾಮಣ್ಣ, ಎಸ್.ಹನುಮಯ್ಯ, ಕೆ.ಮುತ್ತುರಾಜ, ರಮೇಶ್ ಶಿವಪುರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಗೌಡ್ರು ಡಿಂಡಿ ಮಹರ್ಷಿ, ರಾಜ್ಯ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ್, ಪ್ರಮುಖರಾದ ಕೆ.ಶ್ರೀನಿವಾಸರಾವ್, ಇಟಗಿ ಬಸಲಿಂಗಪ್ಪ, ಚನ್ನಬಸವನಗೌಡ, ಕೆ.ಷಣ್ಮುಖಪ್ಪ, ವೈ.ರಮಣಯ್ಯ ಇದ್ದರು.