ಬಿ.ವೈ.ವಿಜಯೇಂದ್ರ  
ಬಳ್ಳಾರಿ

ಪಕ್ಷದ ಶಾಸಕನನ್ನು ಜೈಲಿಗೆ ಹಾಕಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರ
  • ಪ್ರಚೋದನಕಾರಿ
  • ಅಂಗರಕ್ಷಕ
ಬಳ್ಳಾರಿ : ರಾಜ್ಯ ಸರ್ಕಾರ ದ್ವೇಷ ಭಾಷಣ ಕಾಯ್ದೆ ಜಾರಿಗೊಳಿಸಲು ಹೊರಟಿದ್ದು, ಈ ಗಲಾಟೆಗೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿರುವ ಶಾಸಕ ನಾರಾ ಭರತರೆಡ್ಡಿಯನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ ನಿಮಗೆ ತಾಕತ್ತು ಇದ್ದರೆ, ಮೊದಲ ನಿಮ್ಮ ಪಕ್ಷದ ಶಾಸಕನನ್ನು ಜೈಲಿಗೆ ಹಾಕಿ ಎಂದು ಸವಾಲು ಹಾಕಿದರು.
ಈಗಾಗಲೇ ಬಿಜೆಪಿ ಅಧಿಕಾರವಧಿಯಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಆನಂದ ಸಿಂಗ್, ಶಾಸಕ ಜನಾರ್ದನರೆಡ್ಡಿ ಸೇರಿ ಸಿಎಂ ಯಡಿಯೂರಪ್ಪ ಅವರನ್ನು ಮನವೊಲಿಸಿ ವಾಲ್ಮೀಕಿ ಜಯಂತಿ ದಿನದಂದು ಸರ್ಕಾರಿ ರಜೆ ಘೋಷಿಸಿ, ಜಯಂತಿ ಆಚರಣೆ ಮಾಡಿಸಿದರು. ಅಲ್ಲದೆ, ನಗರದಲ್ಲಿಯೇ ರೆಡ್ಡಿ ಹಾಗೂ ರಾಮುಲು ಸೇರಿ ಎಸ್ಪಿ ವೃತ್ತದಲ್ಲೇ ವಾಲ್ಮೀಕಿ ಪುತ್ಥಳಿ ಪ್ರತಿಮೆ ಅನಾವರಣಗೊಳಿಸಿದ್ದಾರೆ. ಆದರೆ, ನಿಮ್ಮ ರಾಜಕೀಯ ತೆವಲಿಗಾಗಿ ಮತ್ತೊಂದು ಪ್ರತಿಮೆ ಸ್ಥಾಪಿಸಿ, ಅನಾವರಣ ಕಾರ್ಯಕ್ರಮಕ್ಕೆ ಬ್ಯಾನರ್ ಹಾಕಿಸಿ ಬೆಂಬಲಿಗರಿಂದ ಗಲಾಟೆ ಮಾಡಿಸಿದ್ದಿರಿ. ಇಂತಹ ಹೀನ ಕೃತ್ಯ ಎಸಗಲು ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದು ಅಕ್ರೋಶಗೊಂಡರು.
ಜಿಲ್ಲೆಯಲ್ಲಿ ಶಾಸಕ ನಾರಾ ಭರತರೆಡ್ಡಿ ನೇತೃತ್ವದಲ್ಲಿ ಬ್ಯಾನರ್ ವಿಚಾರದಲ್ಲಿ ದೊಂಬಿ ಎಬ್ಬಿಸಿ, ಗೂಂಡಾಗಿರಿ ನಡೆಸಿದ್ದಾರೆ. ಈ ಘಟನೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದು, ಶಾಸಕನ ಖಾಸಗಿ ಅಂಗರಕ್ಷಕನಿಂದ ಫೈರ್‌ಯಾಗಿ ಓರ್ವ ಮೃತಪಟ್ಟಿದ್ದಾನೆ. ಆದ್ದರಿಂದ, ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೂಲಕ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮಜರುಗಿಸಬೇಕು ಎಂದರು.
ಶಾಸಕ ಜನಾರ್ದನರೆಡ್ಡಿ ಭೇಟಿಗೂ ಮುನ್ನ ನಗರದ ಅರುಣೋದಯ ಆಸ್ಪತ್ರೆಗೆ ಭೇಟಿ ಕಾರ್ಯಕರ್ತನ ಆರೋಗ್ಯ ವಿಚಾರಿಸಿದರು. ಬಳಿಕ ಜಿಲ್ಲೆಯ ಎಲ್ಲ ಶಾಸಕರ ಹಾಗೂ ಮುಖಂಡರ ನೇತೃತ್ವದಲ್ಲಿ ಪೊಲೀಸರಿಗೆ ಎಎಸ್ಪಿಗೆ ಮನವಿ ನೀಡಿದರು.
===