ದೇವಸಮುದ್ರ ಕ್ರಾಸ್ ಗೋಶಾಲೆ ಆವರಣದಲ್ಲಿ ಗೋಮಾತೆಯ ವೈಭವ ಕುರಿತು ವಿಜಯನಗರದ ಗಮಕ ಕಲಾ ಪರಿಷತ್ ಅಧ್ಯಕ್ಷೆ ಪಲ್ಲವಿ ಆರ್.ಭಟ್ ಗಮಕ ಹಾಗೂ ಉಪಾಧ್ಯಕ್ಷೆ ವಿದ್ಯಾಶ್ರೀ ಸಿದ್ಧೇಶ ವ್ಯಾಖ್ಯಾನ ಪ್ರಸ್ತುತಪಡಿಸಿದರು. 
ಬಳ್ಳಾರಿ

ಶಾಸ್ತ್ರೀಯ ಜೀವನ ಪದ್ಧತಿ ಅಳವಡಿಕೆ ಅಗತ್ಯ

ಶಾಮಸುಂದರ್ ಕೊಪ್ಪಳಕರ್
ಕಂಪ್ಲಿ: ಸಾವಯವ ಕೃಷಿಗೆ ಹಿಂದಿರುಗದಿದ್ದರೆ ಮನುಷ್ಯ ಕುಲಕ್ಕೆ ಉಳಿಗಾಲ ಇಲ್ಲ ಎಂದು ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಚನ್ನಮಲ್ಲಯ್ಯಶಾಸ್ತ್ರಿ ಹೇಳಿದರು.
ದೇವಸಮುದ್ರ ಕ್ರಾಸ್‌ನಲ್ಲಿರುವ ಗೋಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಮತ್ತು ರೈತರಿಗಾಗಿ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು. ಆಹಾರ, ಗಾಳಿ, ನೀರು, ವಾತಾವರಣ ಸಂಪೂರ್ಣ ಕಲುಷಿತಗೊಂಡಿರುವುದು ಗಂಡಾಂತರಕಾರಿಯಾಗಿದೆ. ರಾಸಾಯನಿಕ ಮುಕ್ತ ಸಂಕೋಲೆಗಳಿಂದ ವಿಮುಖರಾಗಲು ಕಡ್ಡಾಯವಾಗಿ ಸಾವಯವ ಕೃಷಿ, ಗೋ ಸಾಕಣೆ, ಶಾಸ್ತ್ರೀಯ ಜೀವನ ಪದ್ಧತಿ ಅಳವಡಿಕೆ ಅಗತ್ಯ ಎಂದರು.
ನಂದಿಪುರದ ಡಾ.ಮಹೇಶ್ವರಸ್ವಾಮೀಜಿ, ರೌಡಕುಂದದ ಶಿವಯೋಗಿ ಶಿವಾಚಾರ್ಯರು, ಅಜಾತಶಂಭುಲಿಂಗ ಶಿವಾಚಾರ್ಯರು, ಕೀಟಶಾಸ್ತ್ರಜ್ಞ ಡಾ.ಪಿ.ಆರ್.ಬದ್ರಿಪ್ರಸಾದ್, ಬಿ.ಎಂ.ವೀರಪ್ಪಯ್ಯ, ಕೆ.ತಿಮ್ಮಣ್ಣ, ಪಡೆಯಪ್ಪ ಉಳಸದ್, ಎಸ್.ವಿ.ಸಜ್ಜನ್, ಬಸಯ್ಯ ಹಿರೇಮಠ, ಕೆ.ಎಂ.ಬಸವರಾಜಶಾಸ್ತ್ರಿ ಇತರರಿದ್ದರು.
ಹರಿಹರದ ಶಾಂಭವಿ ಯೋಗರಾಜರ ಮಾರ್ಗದರ್ಶನದಲ್ಲಿ ಕೆ.ವೈ.ಸೃಷ್ಟಿ ಯೋಗ ನೃತ್ಯ ಪ್ರದರ್ಶಿಸಿದರು. ವಿಜಯನಗರದ ಗಮಕ ಕಲಾ ಪರಿಷತ್ ಅಧ್ಯಕ್ಷೆ ಪಲ್ಲವಿ ಆರ್.ಭಟ್ ಗಮಕ ವಾಚನ, ಉಪಾಧ್ಯಕ್ಷೆ ವಿದ್ಯಾಶ್ರೀ ಸಿದ್ಧೇಶ ಕುಮಾರವ್ಯಾಸ ಭಾರತದ ಗೋವರ್ಧನೋದ್ಧಾರ ಕಥಾ ಪ್ರಸಂಗದ ಗೋಮಾತೆ ವೈಭವ, ಸೋಮೇಶ್ವರ ಶತಕ ಕುರಿತು ವ್ಯಾಖ್ಯಾನ ಪ್ರಸ್ತುತಪಡಿಸಿದರು.