ಸಿರಿಗೇರಿಯಲ್ಲಿ ಸುನ್ನಿ ಜಾಮಿಯಾ ಮಸೀದಿ ಕಮಿಟಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಸಿರಿಗೇರಿ: ಇಸ್ಲಾಂ ಧರ್ಮದ ತತ್ವ, ಸಿದ್ಧಾಂತಗಳು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಗುರು ಹಿರಿಯರಿಗೆ ಗೌರವ ನೀಡುವುದು, ಸಮಯ ಪಾಲನೆ, ಸಹಬಾಳ್ವೆಯಿಂದ ಜೀವಿಸುವುದನ್ನು ಕಲಿಸುತ್ತವೆ ಎಂದು ಸುನ್ನಿ ಜಾಮಿಯಾ ಮಸೀದಿ ಕಮಿಟಿ ಅಧ್ಯಕ್ಷ ಎಸ್.ಖಾದರ್ ಬಾಷಾ ಹೇಳಿದರು.
ಗ್ರಾಮದಲ್ಲಿ ಸುನ್ನಿ ಜಾಮಿಯಾ ಮಸೀದಿ ಕಮಿಟಿಯಿಂದ ಆಯೋಜಿಸಿದ್ದ ಬೇಸಿಗೆ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಪೀಳಿಗೆ ಕಾರ್ಯ ವೈಖರಿಯನ್ನು ಬದಲಾಯಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಶಿಬಿರದಲ್ಲಿ ಶಿಕ್ಷಣ ನೀಡಲಾಗಿದೆ ಎಂದರು.
ಶಿಬಿರದ ಸಂಯೋಜಕರಾದ ಶಮಾಪರ್ವೀನ್, ಮೌಲಾನಾ ಆಸಿಫ್ ರಿಪ್ರಾಯಿ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಫಲಕ ನೀಡಲಾಯಿತು. ತೆಕ್ಕಲಕೋಟೆ ಕಮಿಟಿ ಅಧ್ಯಕ್ಷ ಸೈಯದ್ ಮೋಯಿನುದ್ದೀನ್ ಖಾದ್ರಿ, ಪ್ರಮುಖರಾದ ಡಾ.ಮುರ್ಷಿದ್ ಅಹ್ಮದ್, ಕೆ.ನಬಿಸಾಬ್, ಮಹಮ್ಮದ್ ರಫೀಕ್, ಜಿಲಾನ್ ಬಾಷಾ, ಬಿ. ಅನ್ವರ್ ಬಾಷ, ಎಸ್.ಚಾಂದ್ ಬಾಷಾ, ಎಸ್.ನಿಸಾರ್ ಅಹಮದ್, ಮುಖ್ಯಶಿಕ್ಷಕ ಎಚ್.ಕೆ.ಮಹಮ್ಮದ್ ರಫಿಕ್ ಇದ್ದರು.